ADVERTISEMENT

ಕಲಬುರಗಿ: ವ್ಯಕ್ತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 6:32 IST
Last Updated 26 ಸೆಪ್ಟೆಂಬರ್ 2025, 6:32 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ಕಲಬುರಗಿ: ನಿರಂತರ ಮಳೆಯಿಂದ ಹೊಲಗಳಲ್ಲಿ ಟ್ರ್ಯಾಕ್ಟರ್‌ಗೆ ಬಾಡಿಗೆ ಸಿಗದಿದ್ದರಿಂದ ನೊಂದು ವ್ಯಕ್ತಿಯೊಬ್ಬರು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ಫರಹತಾಬಾದ್‌ ನಿವಾಸಿ ಮಹಾಂತೇಶ ಮಂದೇವಾಲ ಮೃತರು. ಈ ಕುರಿತು ಮೃತರ ಸಹೋದರ ನೀಡಿದ ದೂರಿನನ್ವಯ ಫರಹತಾಬಾದ್‌ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಕಾರಿನ ಗಾಜು ಒಡೆದು ಕಳವು

ನಗರದ ಜಗತ್ ವೃತ್ತದ ಬಳಿ ನಿಲ್ಲಿಸಿದ್ದ ಕಾರಿನ ಹಿಂದಿನ ಗಾಜು ಒಡೆದ ಕಳ್ಳರು ₹ 1.40 ಲಕ್ಷ ಮೌಲ್ಯದ ಎರಡು ಲ್ಯಾಪ್‌ಟಾಪ್‌, ₹ 20 ಸಾವಿರ ಮೌಲ್ಯದ ಏರ್‌ಬಡ್ಸ್‌ ಸೇರಿದಂತೆ ಒಟ್ಟು ₹ 1.73 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.

ಈ ಕುರಿತು ಮಾಬುಸಾಬ್ ನದಾಫ ನೀಡಿರುವ ದೂರಿನನ್ವಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.