ADVERTISEMENT

ಅಫಜಲಪುರ | ಮುಖ್ಯಮಂತ್ರಿ ಆಗಿ ದೇವಸ್ಥಾನಕ್ಕೆ ಬರುತ್ತೇನೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 7:55 IST
Last Updated 13 ಏಪ್ರಿಲ್ 2024, 7:55 IST
<div class="paragraphs"><p>ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರ ದತ್ತ ಮಹಾರಾಜರ ದೇವಸ್ಥಾನಕ್ಕೆ ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ, ದತ್ತ ಮಹಾರಾಜರ ಆಶೀರ್ವಾದ ಪಡೆದರು</p></div>

ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರ ದತ್ತ ಮಹಾರಾಜರ ದೇವಸ್ಥಾನಕ್ಕೆ ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ, ದತ್ತ ಮಹಾರಾಜರ ಆಶೀರ್ವಾದ ಪಡೆದರು

   

ಅಫಜಲಪುರ (ಕಲಬುರಗಿ ಜಿಲ್ಲೆ): ‘ಈ ಭಾಗದಲ್ಲಿ ದೇವಲ ಗಾಣಗಾಪುರ ದತ್ತ ಮಹಾರಾಜರ ದೇವಸ್ಥಾನ ಪವಿತ್ರವಾಗಿದ್ದು, ಅಪಾರ ಭಕ್ತರನ್ನು ಹೊಂದಿದ್ದಾರೆ. ಅದಕ್ಕಾಗಿ ಈ ದೇವಸ್ಥಾನವನ್ನು ಅಭಿವೃದ್ಧಿ ಮಾಡಲಾಗುವುದು, ತಾವೆಲ್ಲಾ ಅರ್ಚಕರು ನಾನು ಮುಖ್ಯಮಂತ್ರಿ ಆಗಿ ಬರಬೇಕೆಂದು ಆಶೀರ್ವಾದ ನೀಡಿ ಸನ್ಮಾನ ಮಾಡಿದ್ದೀರಿ. ಅದಕ್ಕೆ ದತ್ತಾತ್ರೇಯ ಮಹಾರಾಜರ ಆಶೀರ್ವಾದದಿಂದ ಮುಖ್ಯಮಂತ್ರಿಯಾದರೆ ಮತ್ತೊಮ್ಮೆ ದೇವಸ್ಥಾನಕ್ಕೆ ಬರುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರನ್ನು ಸನ್ಮಾನಿಸಿದ ಅರ್ಚಕರು ಮತ್ತೊಮ್ಮೆ ದೇವಲ ಗಾಣಗಾಪುರಕ್ಕೆ ಮುಖ್ಯಮಂತ್ರಿಯಾಗಿ ಬರಬೇಕು. ತಮಗೆ ದತ್ತಾತ್ರೇಯ ಮಹಾರಾಜರ ಆಶೀರ್ವಾದವಿದೆ ಎಂದರು.

ADVERTISEMENT

ಪೂಜಾ ಕೈಂಕರ್ಯವನ್ನು ಅರ್ಚಕರಾದ ಉದಯ ಭಟ್ ಪೂಜಾರಿ, ಪ್ರಸನ್ನ ಪಿ. ಪೂಜಾರಿ, ಗಂಗಾಧರ್ ಎಸ್.ಪೂಜಾರಿ, ಪ್ರಫುಲ್ ಪಿ.ಪೂಜಾರಿ, ದೇವಿದಾಸ್ ಎ.ಪೂಜಾರಿ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.