ADVERTISEMENT

ಅಫಜಲಪುರ: ಪಿಂಚಣಿ ಸೌಲಭ್ಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 14:37 IST
Last Updated 22 ಡಿಸೆಂಬರ್ 2019, 14:37 IST
ಅಫಜಲಪುರದಲ್ಲಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದವರು ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು
ಅಫಜಲಪುರದಲ್ಲಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದವರು ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು   

ಅಫಜಲಪುರ: ‘ಪಿಂಚಣೆ ಸೌಲಭ್ಯ ನೀಡಬೇಕು ಎಂಬ ನಮ್ಮ ಬೇಡಿಕೆಗೆ ಸರ್ಕಾರ ಇನ್ನಾದರೂ ಸ್ಪಂದಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಮಾಡುವುದು ಅನಿವಾರ್ಯ’ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರಾಜಶೇಖರ ತಲಾರಿ ಶನಿವಾರ ಇಲ್ಲಿಎಚ್ಚರಿಸಿದರು.

ತಹಶೀಲ್ದಾರ ಯಲ್ಲಪ್ಪ ಸುಬೇದಾರ್ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ‘ನಮಗೆ ಯಾವುದೇ ಪಿಂಚಣಿ (ಎನ್.ಪಿ.ಎಸ್ ಅಥವಾ ಒ.ಪಿ.ಎಸ್)
ಸೌಲಭ್ಯ ದೊರಕಿಲ್ಲ. ಈ ಸೌಲಭ್ಯ ದೊರೆಯದೆ ಅನೇಕರು ಸೇವೆಯಲ್ಲಿರುವಾಗಲೇ ಮರಣ ಹೊಂದಿದ್ದಾರೆ. ಪಿಂಚಣಿಗಾಗಿ ಅನೇಕ ಹೋರಾಟ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ’ ಎಂದರು.
‘ಮುಂದಿನ ದಿನಗಳಲ್ಲಿ ನಮ್ಮ ಕುಟುಂಬ ನಿರ್ವರ್ಹಣೆ ಕಷ್ಟವಾಗುತ್ತದೆ. ಹೀಗಾಗಿ ಸರ್ಕಾರ ನಮ್ಮ ಎಲ್ಲಾ ಬೇಡಿಕೆಗೆ ಸ್ಪಂದಿಸಿ ನ್ಯಾಯ ದೊರಕಿಸಿ ಕೊಡಬೇಕು’ ಎಂದು ಪಿಂಚಣಿ ವಂಚಿತ ನೌಕರರ ಸಂಘದ ಗೌರವಾಧ್ಯಕ್ಷ ರಂಗರಾವ್ ಖೇಡಗಿಕರ್ ಒತ್ತಾಯಿಸಿದರು.

ಪಿಂಚಣಿ ವಂಚಿತ ನೌಕರ ಸಂಘದ ಕಾರ್ಯದರ್ಶಿ ಯಲ್ಲಪ್ಪ ತಳವಾರ ಮಾತನಾಡಿ, ‘ಸರ್ಕಾರ ಪಿಂಚಣಿ ವಂಚಿತ ನೌಕರರಿಗೆ ನ್ಯಾಯ ಕೊಡದೆ ವಂಚಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಶಿಕ್ಷಕರಾದ ಬಸವರಾಜ ಫುಲಾರಿ, ರಮೇಶ ಜೇರಟಗಿ, ಬಸವರಾಜ ಸಕ್ಕರಗಿ, ಸುಭಾಷ ಆಲೂರ್, ಪ್ರಕಾಶ
ಮಣೂರ, ಶಿವಶರಣ ವಾಲೆ, ಮಲ್ಲಿಕಾರ್ಜುನ್ ಭಜಂತ್ರಿ, ರಾಜಶೇಖರ ದುಳಬಾ, ಸಿದ್ದಪ್ಪ ಹೂಗಾರ, ತೇಜುಸಿಂಗ್ ರಾಠೋಡ, ಗೋವಿಂದ ಚೌಡಾಪುರ, ಗುರುಪಾದ ಸುಬೇದಾರ್, ಬಸವರಾಜ ಹಡಪದ, ಭೀಮರಾವ ಬಿಜಾಪುರ, ಅಪ್ಪಾಸಾಹೇಬ ರಾಮತೀರ್ಥ, ಶಿವಶರಣ ಕಠಗಿಗಾಣ, ಶಿವುಕುಮಾರ ಗೌಳಿ, ರಾಜು ವಾಗ್ಮೊರೆ, ಈರಣ್ಣ ಪಾಟೀಲ್,ಚಂದ್ರಕಾಂತ ಗುಡ್ಡದ್, ಬಿ.ಎಸ್ ಹರಿಜನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.