ADVERTISEMENT

ಆಳಂದ: ವಿವಿಧೆಡೆ ಸಂಭ್ರಮದ ವಿಜಯದಶಮಿ ಆಚರಣೆ

ದಸರಾ ಹಬ್ಬದ ಪ್ರಯುಕ್ತ ಬನ್ನಿ ಮುರಿಯುವ ಆಚರಣೆ, ಪರಸ್ಪರ ಶುಭಾಶಯಗಳ ವಿನಿಮಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 6:39 IST
Last Updated 3 ಅಕ್ಟೋಬರ್ 2025, 6:39 IST
<div class="paragraphs"><p>ಆಳಂದ ಪಟ್ಟಣದಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಬನ್ನಿ ಮುರಿಯುವ ಆಚರಣೆಯು ಜರುಗಿತು</p></div>

ಆಳಂದ ಪಟ್ಟಣದಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಬನ್ನಿ ಮುರಿಯುವ ಆಚರಣೆಯು ಜರುಗಿತು

   

ಆಳಂದ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ದಸರಾ ಹಬ್ಬದ ವಿಜಯದಶಮಿ ಆಚರಣೆಯು ಸಾಂಪ್ರದಾಯಿಕವಾಗಿ ಬನ್ನಿ ಪೂಜೆ ಮತ್ತು ಬನ್ನಿ ಮುರಿಯುವ ಆಚರಣೆಯು ಸಂಭ್ರಮದಿಂದ ನಡೆಯಿತು. ಪರಸ್ಪರ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಳ್ಳಲಾಯಿತು.

ಆಳಂದ ಪಟ್ಟಣದಲ್ಲಿ ಆರ್ಯ ಸಮಾಜ ಹಾಗೂ ಆಳಂದ ತಾಲ್ಲೂಕು ಆಡಳಿತದ ನೇತೃತ್ವದಲ್ಲಿ ಹೊರವಲಯದ ಎ.ವಿ.ಪಾಟೀಲ ಕಾಲೇಜು ಮೈದಾನವರೆಗೂ ಮೆರವಣಿಗೆ ಜರುಗಿತು.

ADVERTISEMENT

ತಹಶೀಲ್ದಾರ್‌ ಅಣ್ಣಾರಾವ ಪಾಟೀಲ, ಗ್ರೇಡ್‌ 2 ತಹಶೀಲ್ದಾರ್‌ ಬಿ.ಜಿ. ಕುದುರಿ, ಕೆಎಂಎಫ್‌ ಅಧ್ಯಕ್ಷ ಆರ್‌ .ಕೆ.ಪಾಟೀಲ, ವೀರಶೈವ ಮಹಾಸಭಾ ತಾಲ್ಲೂಕಾಧ್ಯಕ್ಷ ಶರಣಬಸಪ್ಪ ಪಾಟೀಲ, ರೇವಣಸಿದ್ದಪ್ಪ ನಾಗೂರೆ, ಬಾಬಾಸಾಹೇಬ ಪಾಟೀಲ, ಶಿವಲಿಂಗಯ್ಯ ಸ್ವಾಮಿ, ಸಂಜಯ ನಾಯಕ, ಸಂಜಯ ಮೀಸ್ಕಿನ್‌, ಲಿಂಗರಾಜ ಪಾಟೀಲ, ಶ್ರೀಶೈಲ ಪಾಟೀಲ, ಸೂರ್ಯಕಾಂತ ತಟ್ಟಿ, ಚಂದ್ರಕಾಂತ ಹತ್ತರಕಿ ಉಪಸ್ಥಿತರಿದ್ದರು.

ತಾಲ್ಲೂಕಿನ ಮಾದನ ಹಿಪ್ಪರಗಿ, ಕೊರಳ್ಳಿ, ಸರಸಂಬಾ, ಹಿರೋಳ್ಳಿ, ಖಜೂರಿ, ರುದ್ರವಾಡಿ, ತಡೋಳಾ, ಅಳಂಗಾ, ತಡಕಲ, ಭೂಸನೂರು, ನಿರಗುಡಿ, ಕಡಗಂಚಿ, ನಿಂಬರ್ಗಾ, ನರೋಣಾ, ಹೆಬಳಿ, ಹಳ್ಳಿ ಸಲಗರ, ಗೋಳಾ, ಜಿಡಗಾ, ಬೆಳಮಗಿ ಗ್ರಾಮದಲ್ಲಿಯೂ ಸಾಂಪ್ರಾಯಿಕವಾಗಿ ಬನ್ನಿ ಮುರಿಯುವ ಮೂಲಕ ವಿಜಯದಶಮಿ ಹಬ್ಬದ ಆಚರಣೆ ಜರುಗಿತು.

ಖಜೂರಿ ರಥೋತ್ಸವ ಸಂಭ್ರಮ: ತಾಲ್ಲೂಕಿನ ಖಜೂರಿ ಗ್ರಾಮದ ದೇಶಮುಖ ವಾಡೆಯಲ್ಲಿನ ಶ್ರೀಲಕ್ಷ್ಮಿ ವೆಂಕಟೇಶ ನವರಾತ್ರಿ ಉತ್ಸವವು ಸಂಭ್ರಮದಿಂದ ಜರುಗಿತು. ಗ್ರಾಮದ ಮುಖ್ಯಬೀದಿಗಳಲ್ಲಿ ಲಕ್ಷ್ಮಿ ವೆಂಕಟೇಶ್ವರರ ರಥೋತ್ಸವ ನಡೆಯಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೋಂಡು ಬಾಳೆಹಣ್ಣು, ಉತ್ತತಿ ಮತ್ತಿತರ ಫಲಪುಷ್ಪಗಳನ್ನು ರಥದ ಮೇಲೆ ಸಮರ್ಪಿಸಿದರು. ಸಂಜೀವನ ದೇಶಮುಖ, ಆರ್‌ ಕೆ ಪಾಟೀಲ, ಅಶೋಕ ಸಾವಳೇಶ್ವರ, ಅಶೋಕ ಕುಲಕರ್ಣಿ ಉಪಸ್ಥಿತರಿದ್ದರು.

ಸಂಭ್ರಮದ ದಸರಾ ಆಚರಣೆ

ಕಾಳಗಿ: ನಾಡಹಬ್ಬ ದಸರಾ ಸಂಭ್ರಮದ ಪ್ರಯುಕ್ತ ಪಟ್ಟಣದ ಅಂಬಾಭವಾನಿ ಮಂದಿರದ ಆವರಣದಲ್ಲಿ ವಿಜಯದಶಮಿ ಗುರುವಾರ ಸಂಜೆ ಊರಿನ ಹಿರಿಯರು ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುರಿದು ಸಂಭ್ರಮಿಸಿದರು.

ಜೈಶಂಕರ ಮಾಲಿಪಾಟೀಲ ಮನೆಯಿಂದ ಹಲಗೆ ಮೆರವಣಿಗೆಯೊಂದಿಗೆ ಆಗಮಿಸಿ ಚಂದ್ರಶೇಖರ ಜೋಶಿ ವೈದಿಕತ್ವದಲ್ಲಿ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಅಕ್ಷತೆ ಹಾಕಿದರು. ತಲವಾರದಿಂದ ಬನ್ನಿ ಮುರಿಯುತ್ತಿದ್ದಂತೆ ಎಲ್ಲರೂ ಬನ್ನಿ ಮುರಿದು ದೇವಿಗೆ ಅರ್ಪಿಸಿ ಆರತಿ ಬೆಳಗಿ ಬಳಿಕ ಪರಸ್ಪರ ವಿನಿಮಯ ಮಾಡಿ ಶುಭಕೋರಿದರು.

ಮುಖಂಡ ಸುಭಾಷ ಕದಂ, ತುಳಸಿರಾಮ ಚವಾಣ, ಖುಬಣ್ಣಾ ಪರುತೆ, ಪರಮೇಶ್ವರ ಮಡಿವಾಳ, ನಾಗರಾಜ ಚಿಕ್ಕಮಠ, ಸುಭಾಷ ಬಿರಾದಾರ, ಕುಪ್ಪಣ್ಣ ಬಾಂಬೆ, ನೀಲಕಂಠ ಮಡಿವಾಳ, ಅವಿನಾಶ ಸೇಗೂರ, ವಿಠಲರಾವ ಕೋರೆ, ಶಿವಕುಮಾರ ಪಂಚಾಳ, ವಿಜಯಕುಮಾರ ಮಾಕಪನೋರ, ಶಿವಕಿರಣ ಪ್ಯಾಟಿಮಠ, ಬಂಡು ಬೊಮ್ಮಾಣಿ, ಸುರೇಶ ಸೇಗಾಂವಕರ್, ತಿಮ್ಮಯ್ಯ ಒಡೆಯರಾಜ, ಬಸವರಾಜ ಹೂಡದಳ್ಳಿ ಅನೇಕರು ಭಾಗವಹಿಸಿದ್ದರು.

ಹಬ್ಬದ ಪ್ರಯುಕ್ತ ಅಂಬಾಭವಾನಿ ಮತ್ತು ಬನಶಂಕರಿ ದೇವಸ್ಥಾನದಲ್ಲಿ ಅಮಾವಾಸ್ಯೆ ಮರುದಿನವೇ ಘಟಸ್ಥಾಪನೆ ಮಾಡಲಾಗಿತ್ತು.

ಅದರಂತೆ ಗೋಟೂರ, ರಟಕಲ್, ತೆಂಗಳಿ, ಬಣಬಿ, ಕೋಡ್ಲಿ, ಭರತನೂರ, ಸುಗೂರ, ಕೊರವಿ, ಹೇರೂರ, ಹುಳಗೇರಾ ಮುಂತಾದ ಗ್ರಾಮಗಳ ದೇವಿ ಮಂದಿರಗಳಲ್ಲಿ ಘಟಸ್ಥಾಪನೆ ಮಾಡಿ ಬೆಳಿಗ್ಗೆ, ಸಂಜೆ ವಿಶೇಷ ಪೂಜೆ ಸಲ್ಲಿಸಿ ಭಕ್ತರು ಮೀಸಲು ಮೈಯಿಂದ ದರ್ಶನ ಪಡೆದು ಭಕ್ತಿಭಾವ ಮೆರೆದರು.

ಶಮಿ ವೃಕ್ಷಕ್ಕೆ ಪೂಜೆ

ಚಿಂಚೋಳಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ವಿಜಯ ದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಮಹಾಂತೇಶ್ವರ ಮಠದಿಂದ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ‌ ತೆರಳಿ ಮೈಲಾರ ಮಲ್ಲಣ್ಣ ದೇವರ ಗುಡಿಯ ಬಳಿಗೆ ಶಮಿ ವೃಕ್ಷಕ್ಕೆ ತೆರಳಿ ಪೂಜೆ ಸಲ್ಲಿಸಿ‌ ಮಂಗಳಾರತಿ ಸಲ್ಲಿಸಿ ಬನ್ನಿ ಮುರಿದರು.

ಮರಳಿ‌ ಮಹಾಂತೇಶ್ವರ ಮಠಕ್ಕೆ ಆಗಮಿಸಿ ಮಹಾಂತೇಶ್ವರ ಗದ್ದುಗೆಗೆ ಮಂಗಳಾರತಿ ಸಲ್ಲಿಸಿ ಬನ್ನಿ‌ಬಂಗಾರ ಅರ್ಪಿಸಿದರು. ಉತ್ಸವದಲ್ಲಿ‌ ಸಿದ್ದಯ್ಯ ಸ್ವಾಮಿ, ಶಿವಶಂಕರ ಶಿವಪುರಿ, ಶರಣಪ್ಪ‌ ಹಲಚೇರಿ, ಸಂಗಪ್ಪ ಪಾಲಾಮೂರ, ಶಾಂತವೀರ ಸುಂಕದ, ಮಲ್ಲಿಕಾರ್ಜುನ‌ ಭೂಶೆಟ್ಟಿ, ಸಚ್ಚಿದಾನಂದ ಸುಂಕದ, ನಾಗರಾಜ‌ ಮಲಕೂಡ, ವೀರೇಂದ್ರ ಜಾಬಶೆಟ್ಟಿ, ಕರಬಸ್ಸಪ್ಪ ಇಟಗಿ, ನಾಗರಾಜ‌ ಕಲಬುರಗಿ, ದತ್ತು‌ ಕಳಸ್ಕರ, ಶಂಕರ ನಾರಾ, ಮಾಣಿಕಪ್ಪ‌ ನಾರಾ ಮೊದಲಾದವರು ಇದ್ದರು.

ನಿಡಗುಂದಾ: ದಸರಾ ಆಚರಣೆ

ಚಿಂಚೋಳಿ: ತಾಲ್ಲೂಕಿನ ನಿಡಗುಂದಾದ ಕಂಚಾಳಕುಂಟಿ ನಂದೀಶ್ವರ ಮಠದಲ್ಲಿ ಕರುಣೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ವಿಜಯ ದಶಮಿ‌ ಪ್ರಯುಕ್ತ ಬನ್ನಿ‌ ಮುರಿಯುವ ಕಾರ್ಯಕ್ರಮ ನಡೆಯಿತು.

ಶ್ರೀಗಳು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಬನ್ನಿ ಮರಕ್ಕೆ ಪ್ರದಕ್ಷಿಣೆ ಹಾಕಿ, ಹೂ, ಎಲೆಗಳಿಂದ ಪೂಜೆ ಸಲ್ಲಿಸಿ,ಬನ್ನಿ ಎಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬ ಆಚರಿಸಿದರು. ಸುಭಾಶ ಕುಸನೂರ, ಶರಣಪ್ಪ ಕುಸನೂರ, ರವೀಂದ್ರ ಕನಕೇರಿ, ವಿಶ್ವನಾಥ ಕನಕೇರಿ,ರುದ್ರಯ್ಯ ಮಠಪತಿ,ರಮೇಶ ಕನಕೇರಿ,ಸುರೇಶ ಪಾಟೀಲ್, ಮರೆಪ್ಪ ಗೌತಮ,ಡಾ. ನಾಗರಾಜ ಕನಕೇರಿ, ಮಹೇಶ ಕನಕೇರಿ, ಸತೀಶ ಕನಕೇರಿ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.