ADVERTISEMENT

PHOTOS: ಗಡಿಕೇಶ್ವಾರದಲ್ಲಿ ಮತ್ತೆ ಕಂಪಿಸಿದ ಭೂಮಿ, ಭಯದಿಂದ ಗ್ರಾಮ ತೊರೆದ ಜನ

ಚಿಂಚೋಳಿ (ಕಲಬುರಗಿ ಜಿಲ್ಲೆ): ಚಿಂಚೋಳಿ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಬೆಳಿಗ್ಗೆ ಮತ್ತೆ ಎರಡು ಬಾರಿ ಭೂಕಂಪನವಾಗಿದೆ. ಇದೂ ಸೇರಿದಂತೆ ಒಂದು ವಾರದಲ್ಲಿ ಏಳು ಬಾರಿ ಭೂಮಿ ಕಂಪಿಸಿದೆ. ಪರಿಣಾಮ, ಗಡಿಕೇಶ್ವಾರ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ.

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 6:43 IST
Last Updated 12 ಅಕ್ಟೋಬರ್ 2021, 6:43 IST
ಗಡಿಕೇಶ್ವಾರ ಗ್ರಾಮ ತೊರೆಯುತ್ತಿರುವ ಜನರು
ಗಡಿಕೇಶ್ವಾರ ಗ್ರಾಮ ತೊರೆಯುತ್ತಿರುವ ಜನರು   
ಗಡಿಕೇಶ್ವಾರ ಗ್ರಾಮದ ಜನ ಊರು ತೊರೆದಿದ್ದಾರೆ. 100 ವರ್ಷ ಹಳೆಯದಾದ ದೊಡ್ಡ ಮನೆಯೊಂದು ಮಂಗಳವಾರ ಖಾಲಿಯಾಗಿದ್ದು ಕಂಡುಬಂತು
ಗಡಿಕೇಶ್ವಾರ ಗ್ರಾಮದ ಜನ ಊರು ತೊರೆದಿದ್ದು, ಗೇಟ್‌ಗಳಿಗೆ ಬೀಗ ಜಡಿದಿರುವುದು ಮಂಗಳವಾರ ಕಂಡುಬಂತು
ಭೂಕಂಪನದ ಕಾರಣ ಕಲ್ಲಿನ ಗೋಡೆ ಬಿರುಕುಬಿಟ್ಟಿದೆ.
ಭೂಕಂಪನದ ಕಾರಣಕ್ಕೆ ಮಹಿಳೆಯರು ತಮ್ಮ ಸ್ವಸಹಾಯ ಸಂಘದ ಸಭೆ ಹಾಗೂ ಕಚೇರಿ ಕೆಲಸಗಳನ್ನು ಮರದಡಿಯಲ್ಲೇ ಕುಳಿತು ನಿರ್ವಹಿಸಿದರು.
ಗಡಿಕೇಶ್ವಾರ ಗ್ರಾಮದ ಜನ ಮನೆಗಳಿಗೆ ಬೀಗ ಹಾಕಿ, ಊರು ತೊರೆದಿದ್ದಾರೆ. ನೂರು ವರ್ಷಗಳಷ್ಟು ಹಳೆಯದಾದ ಎರಡಂತಸ್ತಿನ ಕಲ್ಲಿನ ಮನೆಗಳು ಈ ಊರಲ್ಲಿ ಹೆಚ್ಚಾಗಿವೆ
ಗಡಿಕೇಶ್ವಾರ ಗ್ರಾಮದ ಕುಟುಂಬವೊಂದು ಮಂಗಳವಾರ ಟ್ರ್ಯಾಕ್ಟರ್‌ನಲ್ಲಿ ತಮ್ಮ ಸಾಮಗ್ರಿಗಳ ಸಮೇತ ಊರು ಖಾಲಿ ಮಾಡಿತು.
ಗಡಿಕೇಶ್ವಾರ ಗ್ರಾಮದಲ್ಲಿ ಸೋಮವಾರ (ಅ. 11) ರಾತ್ರಿ 9.55ರ ಸುಮಾರಿಗೆ ಭೂಮಿ ಕಂಪಿಸಿದ್ದರಿಂದ, ಬೆಚ್ಚಿಬಿದ್ದ ಜನ ಮನೆಯಿಂದ ಹೊರಗೇ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.