ADVERTISEMENT

ಶಹಾಬಾದ್ | ವಿದ್ಯುತ್ ಸ್ಪರ್ಶ; ಆಟೊಮೊಬೈಲ್ ಅಂಗಡಿ ಭಸ್ಮ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 15:59 IST
Last Updated 11 ಜನವರಿ 2025, 15:59 IST
ಶಹಾಬಾದ್‌ನಲ್ಲಿ ವಿದ್ಯುತ್ ಸ್ಪರ್ಶದಿಂದ ಬಾಲಾಜಿ ಆಟೊಮೊಬೈಲ್ಸ್ ಅಂಗಡಿ ಭಸ್ಮಗೊಂಡಿರುವುದು
ಶಹಾಬಾದ್‌ನಲ್ಲಿ ವಿದ್ಯುತ್ ಸ್ಪರ್ಶದಿಂದ ಬಾಲಾಜಿ ಆಟೊಮೊಬೈಲ್ಸ್ ಅಂಗಡಿ ಭಸ್ಮಗೊಂಡಿರುವುದು   

ಶಹಾಬಾದ್: ನಗರದ ಜೇವರ್ಗಿ ರಸ್ತೆಯಲ್ಲಿನ ಚಿನ್ನಾಜಿ ಕಾಂಪ್ಲೆಕ್ಸ್‌ನಲ್ಲಿನ ಬಾಲಾಜಿ ಆಟೊಮೊಬೈಲ್ಸ್ ಅಂಗಡಿ ವಿದ್ಯುತ್ ಸ್ಪರ್ಶದಿಂದ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಜರುಗಿದೆ.

ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಹತ್ತಿದ್ದು, ಸ್ಥಳದಲ್ಲಿ ಇದ್ದ ಸಾರ್ವಜನಿಕರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗದೇ ಸುಮಾರು ನಾಲ್ಕು ಗಂಟೆ ಹೊತ್ತಿ ಉರಿದಿದೆ.

ಅಂಗಡಿಯಲ್ಲಿದ್ದ ವಾಹನಕ್ಕೆ ಬಳಸುವ ಬೆಲೆಬಾಳುವ ಆಯಿಲ್‌ಗಳು, ಯಂತ್ರೋಪಕರಣಗಳ ಬಿಡಿ ಭಾಗಗಳು, ಪ್ಲಾಸ್ಟಿಕ್ ಸಾಮಗ್ರಿ, ಇಂಜಿನ್ ಸಾಮಗ್ರಿಗಳು ಭಸ್ಮವಾಗಿವೆ. ಚಿತ್ತಾಪುರ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಮೊದಲೇ ಸಂಪೂರ್ಣ ಸುಟ್ಟು ಹೋಗಿತ್ತು. ಸುಮಾರು ₹15 ಲಕ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಅಂಗಡಿ ಮಾಲೀಕ ಮಹಾಂತಪ್ಪ ಕುಮಸಿಕರ್ ಹೇಳಿದ್ದಾರೆ.

ADVERTISEMENT

ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಶಂಕರಗೌಡ ಪಾಟೀಲ ಪರಿಶೀಲಿಸಿದ ನಂತರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.