ADVERTISEMENT

ಮಕ್ಕಳಿಗೆ ಭಾವನಾತ್ಮಕ ಬೆಸುಗೆ ಮುಖ್ಯ: ಜಗನ್ನಾಥ ತರನಳ್ಳಿ

ಬಾಲ ಪ್ರತಿಭೆಗಳಿಗೆ ಮಡಿಲು ಮುತ್ತು ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 6:29 IST
Last Updated 15 ಡಿಸೆಂಬರ್ 2025, 6:29 IST
ಕಲಬುರಗಿಯ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶಿಷ್ಟ ಪ್ರತಿಭೆ ಮೂಲಕ ಗಮನ ಸೆಳೆದ ಎಂಟು ವಿದ್ಯಾರ್ಥಿಗಳಿಗೆ ‘ಮಡಿಲ ಮುತ್ತು ಪ್ರಶಸ್ತಿ’ ನೀಡಿ ಗೌರವಿಸಲಾಯಿತು
ಕಲಬುರಗಿಯ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶಿಷ್ಟ ಪ್ರತಿಭೆ ಮೂಲಕ ಗಮನ ಸೆಳೆದ ಎಂಟು ವಿದ್ಯಾರ್ಥಿಗಳಿಗೆ ‘ಮಡಿಲ ಮುತ್ತು ಪ್ರಶಸ್ತಿ’ ನೀಡಿ ಗೌರವಿಸಲಾಯಿತು   

ಕಲಬುರಗಿ: ‘ಆಡುತ್ತ ನಲಿಯುವ ಮಕ್ಕಳಿಗೆ ಭಾವನಾತ್ಮಕ ಬೆಸುಗೆ ತುಂಬಾ ಮುಖ್ಯ. ಮಕ್ಕಳಲ್ಲಿ ಮುಗ್ಧತೆ ಮತ್ತು ಪ್ರೀತಿಯ ಹೃದಯ ಕಾಣುತ್ತೇವೆ’ ಎಂದು ಸಾಹಿತಿ ಜಗನ್ನಾಥ ತರನಳ್ಳಿ ಹೇಳಿದರು.

ಸಮೃದ್ಧಿ ಫೌಂಡೇಷನ್ ವತಿಯಿಂದ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಬಾಲ ಪ್ರತಿಭೆಗಳಿಗೆ ಮಡಿಲ ಮುತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜಯಕುಮಾರ ತೇಗಲತಿಪ್ಪಿ ಅವರು ಮಗಳ ನೆನಪಿನಲ್ಲಿ ಸಮಾಜದ ಮಕ್ಕಳಿಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ವೀರಶೈವ ಸಮಾಜದ ಉಪಾಧ್ಯಕ್ಷ ಕಲ್ಯಾಣಪ್ಪ ಮಳಖೇಡ ಮಾತನಾಡಿ, ಇಂದಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದ್ದು, ಮಾನವೀಯ ಮತ್ತು ನೈತಿಕ ಮೌಲ್ಯಗಳನ್ನು ತಿಳಿಸಿಕೊಡಬೇಕಾಗಿದೆ ಎಂದು ಹೇಳಿದರು.

ADVERTISEMENT

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು.

ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಧರ್ಮರಾಜ ಜವಳಿ, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಡಾ.ರೆಹಮಾನ್ ಪಟೇಲ್, ಭುವನೇಶ್ವರಿ ಹಳ್ಳಿಖೇಡ್, ಗಣೇಶ ಚಿನ್ನಾಕಾರ, ಶಕುಂತಲಾ ಪಾಟೀಲ, ಜಯಶ್ರೀ ಜಮಾದಾರ, ಜ್ಯೋತಿ ಕೋಟನೂರ, ಡಾ.ಶರಣಕುಮಾರ ಕಂಠಿ, ರವೀಂದ್ರ ಬೋಗಶೆಟ್ಟಿ, ಎಸ್.ಕೆ. ಬಿರಾದಾರ, ಶರಣಬಸಪ್ಪ ಕೋಬಾಳ, ಪ್ರಭುಲಿಂಗ ಮೂಲಗೆ, ಬಾಬುರಾವ ಪಾಟೀಲ, ಎಂ.ಎನ್. ಸುಗಂಧಿ, ಲಲಿತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಶಿಷ್ಟ ಪ್ರತಿಭೆ ಮೂಲಕ ಗಮನ ಸೆಳೆದ ಎಂಟು ವಿದ್ಯಾರ್ಥಿಗಳಿಗೆ ‘ಮಡಿಲ ಮುತ್ತು ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಮಕ್ಕಳು ಪ್ರದರ್ಶಿಸಿದ ಭರತನಾಟ್ಯ, ಏಕಪಾತ್ರಾಭಿನಯ ಪ್ರೇಕ್ಷಕರ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.