ADVERTISEMENT

ಚೌಡಾಪುರ: ಮೂವರು ನಕಲಿ ಸಿಬಿಐ ಅಧಿಕಾರಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 8:31 IST
Last Updated 26 ಜುಲೈ 2022, 8:31 IST
ಕಲಬುರಗಿ ಜಿಲ್ಲೆ ಅಫಜಲ‍ಪುರ ತಾಲ್ಲೂಕಿನ ದೇವಲ ಗಾಣಗಾಪೂರ ಠಾಣೆ ಪೊಲೀಸರು ಮೂವರನ್ನು ಬಂಧಿಸಿರುವುದು. ಪಿಎಸ್ಐ ರಾಜಶೇಖರ ರಾಠೋಡ ಹಾಗೂ ಸಿಬ್ಬಂದಿ ಇದ್ದರು
ಕಲಬುರಗಿ ಜಿಲ್ಲೆ ಅಫಜಲ‍ಪುರ ತಾಲ್ಲೂಕಿನ ದೇವಲ ಗಾಣಗಾಪೂರ ಠಾಣೆ ಪೊಲೀಸರು ಮೂವರನ್ನು ಬಂಧಿಸಿರುವುದು. ಪಿಎಸ್ಐ ರಾಜಶೇಖರ ರಾಠೋಡ ಹಾಗೂ ಸಿಬ್ಬಂದಿ ಇದ್ದರು   

ಅಫಜಲಪುರ: ತಾಲ್ಲೂಕಿನ ಚೌಡಾಪುರದಲ್ಲಿ ವ್ಯಕ್ತಿಯೊಬ್ಬನಿಗೆ ಅಪಹರಿಸಿ ತಾವು ಸಿಬಿಐ ಅಧಿಕಾರಿಗಳೆಂದು ಹೆದರಿಸಿ ₹ 11.20 ಲಕ್ಷ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಲ ಗಾಣಗಾಪೂರ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಜುಲೈ 21 ರಂದು ರಾತ್ರಿ 10.30ಕ್ಕೆ ಚೌಡಾಪುರ ಗ್ರಾಮದಲ್ಲಿ ನಾಲ್ವರು ಅಪರಿಚಿತರು, ನಾವು ಸಿಬಿಐ ಅಧಿಕಾರಿಗಳಿದ್ದೇವೆ. ನೀವು ಮಟ್ಕಾ ಬರೆದುಕೊಳ್ಳುವ ದಂಧೆ ಮಾಡುತ್ತಿದೆ ಎಂದು ತಿಳಿದುಬಂದಿದೆ ಎಂದು ಧಮಕಿ ಹಾಕಿ ಯಂಕಪ್ಪ ಹಣಮಂತ್ ದೇವಕರ್ ಎಂಬುವವರಿಗೆ ಜೀಪಿನಲ್ಲಿ ಹಾಕಿಕೊಂಡು ಮದರಾ (ಬಿ) ಕ್ರಾಸ್‌ಗೆ ಕರೆದುಕೊಂಡು ₹ 11.20 ಲಕ್ಷ ಕೊಟ್ಟರೆ ನಿನಗೆ ಬಿಡುತ್ತೇವೆ. ಇಲ್ಲದಿದ್ದರೆ ಜೈಲಿಗೆ ಹಾಕುತ್ತೇವೆ ಎಂದು ಹೆದರಿಸಿದರು. ನಂತರ ಸಾರ್ವಜನಿಕರು ಕೂಡಿದ್ದರಿಂದ ಯಂಕಪ್ಪ ದೇವಕರ್ ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಈ ಕುರಿತು ದೇವ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿತ್ತು.

ಗುಡೂರ್ ತಾಂಡಾ ನಿವಾಸಿ ರಾಮು ಪವಾರ್, ಜಾನೇಶ್ ದೇಸು ಚವ್ಹಾಣ್ ಹಾಗೂ ಸ್ಟೇಷನ್ ಗಾಣಗಾಪುರದ ಬಸವರಾಜ ಗುರುಶಾಂತ ದಿಂಗೆ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಬಂಧಿತರಿಂದ ಕೃತ್ಯಕ್ಕೆ ಬಳಸಿದ ವಾಹನ ವಶಪಡಿಸಿಕೊ೦ಡು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಕಳಿಸಿದ್ದಾರೆ.

ಪಿಎಸ್ಐ ರಾಜಶೇಖರ ರಾಠೋಡ, ಸಿಬ್ಬಂದಿಗಳಾದ ಪ್ರಭು, ನಿಂಗಪ್ಪ, ಮಲ್ಲಿಕಾರ್ಜುನ, ನಾಗೇಂದ್ರ, ಶಿವಾನಂದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.