
ಪ್ರಜಾವಾಣಿ ವಾರ್ತೆ
ಕಮಲಾಪುರ (ಕಲಬುರಗಿ ಜಿಲ್ಲೆ): ಹೊಲದಲ್ಲಿ ರಾಶಿ ಮಾಡುವಾಗ ಯಂತ್ರಕ್ಕೆ ಸಿಲುಕಿ ತಾಲ್ಲೂಕಿನ ಮುದ್ದಡಗಾ ಗ್ರಾಮದ ರೈತ ಮಹಿಳೆ ಗಂಗಮ್ಮ ಸುಧಾಕರ ಹಾಗರಗಿ (35) ಶುಕ್ರವಾರ ಮೃತಪಟ್ಟಿದ್ದಾರೆ.
ಹೊಲದಲ್ಲಿ ಸೋಯಾಬಿನ್ ರಾಶಿ ಮಾಡುತ್ತಿದ್ದರು. ಫಸಲಿನ ಕಟ್ಟು ಹಾಕುವಾಗ ಸೀರೆ ಯಂತ್ರಕ್ಕೆ ಸಿಲುಕಿದೆ. ಯಂತ್ರದ ವೇಗಕ್ಕೆ ತಲೆ, ದೇಹ ಯಂತ್ರಕ್ಕೆ ಸಿಲುಕಿ ದೇಹ ಭಾಗಶಃ ಯಂತ್ರಕ್ಕೆ ಸಿಲುಕಿ ತುಂಡಾಗಿದೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.