ADVERTISEMENT

ಮುಂಬಡ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ: ಲೇಂಗಟಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 2:20 IST
Last Updated 12 ಮಾರ್ಚ್ 2021, 2:20 IST
ಮುಂಬಡ್ತಿ ಹೊಂದಿದ ತಾಂತ್ರಿಕ ಶಿಕ್ಷಣ ಇಲಾಖೆಯ ಕಚೇರಿ ಅಧಿಕ್ಷಕರನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಲೇಂಗಟಿ ಸನ್ಮಾನಿಸಿದರು. ಶಿವಶರಣಪ್ಪ ಗೌರ ಹಾಗೂ ಇತರರು ಇದ್ದರು
ಮುಂಬಡ್ತಿ ಹೊಂದಿದ ತಾಂತ್ರಿಕ ಶಿಕ್ಷಣ ಇಲಾಖೆಯ ಕಚೇರಿ ಅಧಿಕ್ಷಕರನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಲೇಂಗಟಿ ಸನ್ಮಾನಿಸಿದರು. ಶಿವಶರಣಪ್ಪ ಗೌರ ಹಾಗೂ ಇತರರು ಇದ್ದರು   

ಕಲಬುರ್ಗಿ: ‘ಉನ್ನತ ಹುದ್ದೆಗಳಿಗೆ ಹೋದಂತೆಲ್ಲ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಸರ್ಕಾರ ನಮಗೆ ಮುಂಬಡ್ತಿಗಳು ನೀಡಿದಾಗ ಪಾರದರ್ಶಕವಾಗಿ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ ತಿಳಿಸಿದರು.

ತಾಂತ್ರಿಕ ಶಿಕ್ಷಣ ಇಲಾಖೆಯ ಕಚೇರಿ ಅಧೀಕ್ಷಕರುಗಳಿಗೆ ಸನ್ಮಾನಿಸಿ ಮಾತನಾಡಿದ ಅವರು, ‘ನಮ್ಮ ಬಡ್ತಿ, ವೇತನ, ಭತ್ಯೆಗಳು ಸಂಘಟನೆಯ ಮುಖಾಂತರ ಪಡೆಯುತ್ತೇವೆ. ಆದರೆ ನಾವು ಸರ್ಕಾರದ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು’ ಎಂದರು.

ತಾಂತ್ರಿಕ ಶಿಕ್ಷಣ ಇಲಾಕೆಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಎನ್‌.ಎಸ್‌.ಸಂಗಮ ಮಾತನಾಡಿ, ‘ಸಂಘಟನೆಯ ಮುಖಾಂತರ ನಾವು ಏನನ್ನಾದರೂ ಸಾಧಿಸಲು ಸಾಧ್ಯ. ಇಂದು 107 ಜನರಿಗೆ ಕಚೇರಿ ಅಧೀಕ್ಷಕ ಹುದ್ದೆಗೆ ಮುಂಬಡ್ತಿ ನೀಡಿರುವುದು ಸಂಘಟನೆಯ ಮುಖಾಂತರ ಸಾಧ್ಯವಾಗಿದೆ. ಮುಂಬಡ್ತಿಯ ಪ್ರತಿ ಹಂತದಲ್ಲೂ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಕ್ಷ ಷಡಾಕ್ಷರಿ, ಜಿಲ್ಲಾ ಅಧ್ಯಕ್ಷ ರಾಜು ಲೇಂಗಟಿ ಅವರ ಶ್ರಮ ಕಾರಣ’ ಎಂದು ಹೇಳಿದರು.

ADVERTISEMENT

ನಿವೃತ್ತ ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ ಸಿದ್ದಣ್ಣ ಕೊಲ್ಹಾರ, ಮಲ್ಲಿಕಾರ್ಜುನ ಶಾವಿ, ಎಸ್‌.ಬಿ. ಪಾಟೀಲ, ಬಳ್ಳಾರಿಯ ಪೆದ್ದಣ್ಣ, ಕೊಪ್ಪಳದ ಸಂತೋಷಕುಮಾರ, ವಿಜಯಪುರದ ಡ.ಬಿ. ಮಾಡಗಿ, ಅಧ್ಯಕ್ಷತೆ ವಹಿಸಿದ್ದ ಶಿವಶರಣಪ್ಪ ಗೌರ ಮಾತನಾಡಿದರು.

ರಾಜ್ಯ ಪರಿಷತ್ ಸದಸ್ಯ ಹಣಮಂತರಾಯ ಗೊಳಸಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಸ್ವಾಮಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಮರಡಿ, ಜಿಲ್ಲಾ ಉಪಾಧ್ಯಕ್ಷ ಅಣ್ಣಾರಾವ ಹಾಬಳಕರ, ಎಂ.ಬಿ.ಪಾಟೀಲ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಎಸ್‌.ಬಿ. ಪಾಟೀಲ, ಮಹಿಳಾ ಪಾಲಿಟೆಕ್ನಿಕ್ ಪ್ರಾಚಾರ್ಯೆ ಜಯಲಕ್ಷ್ಮಿ ಎಲ್‌.ಕೆ., ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ ಪ್ರಾಚಾರ್ಯೆ ಶಬಾನಾ ಬೇಗಂ ಇದ್ದರು.

ಲಕ್ಷ್ಮಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಚನ್ನಬಸಪ್ಪ ಮಂಗಲಗಿ ವಂದಿಸಿದರು. ಬಸವರಾಜ ಈರಣ್ಣ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.