ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಶುಕ್ರವಾರ ನಸುಕಿನಲ್ಲಿ 7 ಬಾರಿ ಭೂಮಿಯಿಂದ ವಿಚಿತ್ರವಾದ ಸ್ಫೋಟಕ ಸದ್ದು ಕೇಳಿಸಿದರೆ ಒಮ್ಮೆ ಲಘು ಕಂಪನವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬೆಳಿಗ್ಗೆ 3.24ಕ್ಕೆ ಭೂಮಿ ಅಲುಗಾಡಿದ ಅನುಭವವಾಗಿದೆ ಇದರ ಬೆನ್ನಲ್ಲಿಯೇ ಅರ್ಧ ಗಂಟೆ ಸಮಯದಲ್ಲಿಯೇ 7 ಬಾರಿ ಭೂಮಿಯಿಂದ ಸದ್ದು ಕೇಳಿಬಂದಿದೆ ಎಂದು ಗ್ರಾ.ಪಂ ಮಾಜಿ ಸದಸ್ಯ ವೀರೇಶ ಬೆಳಕೇರಿ ಮುಖಂಡರಾದ ಸಿದ್ದು ಹಲಚೇರಾ ಮತ್ತು ಮಂಗಳಮೂರ್ತಿ ಪ್ರಜಾವಾಣಿಗೆ ತಿಳಿಸಿದರು.
ಇದನ್ನೂ ಓದಿ:ಗಡಿಕೇಶ್ವಾರ: ಭೂಮಿಯಿಂದ ವಿಚಿತ್ರ ಸದ್ದು ಭಯಭೀತ ಜನ
ಭೂಮಿಯಿಂದ ಪದೇ ಪದೇ ಸದ್ದು ಕೇಳಿ ಬರುತ್ತಿರುವುದರಿಂದ ಬೆಚ್ಚಿಬಿದ್ದ ಜನ ಬೆಳಿಗ್ಗೆ 3.30ರಿಂದ ಮನೆಗಳಿಂದ ಹೊರ ಬಂದು ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ರಾತ್ರಿ ಕಳೆದಿದ್ದಾರೆ.
ಮಲ್ಲಿಕಾರ್ಜುನ ಮಂದಿರ, ಹನುಮಾನ ಮಂದಿರ, ಗ್ರಾ.ಪಂ ಕಚೇರಿ ಮೊದಲಾದ ಕಡೆ ಜನ ಜಮಾಯಿಸಿದ್ದರು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.