ADVERTISEMENT

ಕಲಬುರಗಿ: 10 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 16:36 IST
Last Updated 6 ಜುಲೈ 2023, 16:36 IST

ಕಲಬುರಗಿ: ನಗರದ ಬಡಾವಣೆಯೊಂದರ ಮನೆಯಲ್ಲಿ ಐವರು ಬಾಲಕರು 10 ವರ್ಷದ ಬಾಲಕಿ ಮೇಲೆ ಬುಧವಾರ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಈ ಸಂಬಂಧ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಕಲಬುರಗಿ ಮಹಿಳಾ ಠಾಣೆ ಪೊಲೀಸರು ಗುರುವಾರ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಲಕಿಯ ‍‍ಪೋಷಕರು ಒಂದು ವಾರದ ಹಿಂದೆಯಷ್ಟೇ ಆ ಬಡಾವಣೆಯ ಮನೆಗೆ ಬಾಡಿಗೆಗೆ ಬಂದಿದ್ದರು. ಬುಧವಾರ ಮಧ್ಯಾಹ್ನ ಬಾಲಕಿ ಮನೆಯ ಎದುರು ಕುಳಿತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಮೂವರು ಬಾಲಕರು ಚಾಕೊಲೇಟ್ ಕೊಡಿಸುವುದಾಗಿ ₹10 ತೋರಿಸಿ ಬಾಲಕಿಯನ್ನು ಮನೆಯೊಂದಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದರು. ನಂತರ ಬಂದ ಮತ್ತಿಬ್ಬರು ಬಾಲಕರೂ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದರು.

ADVERTISEMENT

ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಬಾಲಕರು 10, 12 ಹಾಗೂ 15 ವರ್ಷದವರಾಗಿದ್ದಾರೆ.

ಆಘಾತಕ್ಕೊಳಗಾದ ಬಾಲಕಿ ಮನೆಗೆ ಬಂದು ತಾಯಿಗೆ ಹೇಳಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಬಾಲಕಿಯ ತಾಯಿ ತಮ್ಮ ಪತಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಲ್ವರು ಬಾಲಕರನ್ನು ವಶಕ್ಕೆ ಪಡೆದು ಬಾಲ ನ್ಯಾಯಮಂಡಳಿ ಎದುರು ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.