ADVERTISEMENT

‘ಅಂತರಂಗದ ವಿಕಾಸಕ್ಕೆ ಸಂಸ್ಕಾರ ಅಗತ್ಯ’

ಹೊನ್ನಕಿರಣಗಿ: ಜಂಗಮ ವಟುಗಳ ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 22 ಮೇ 2022, 2:17 IST
Last Updated 22 ಮೇ 2022, 2:17 IST
ಕಲಬುರಗಿ ತಾಲ್ಲೂಕಿನ ಹಿನ್ನ ಕಿರಣಗಿ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ನಡೆದ 14ನೇ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಚಂದ್ರಗುಂಡ ಶಿವಾಚಾರ್ಯರು ಹಾಗೂ ಸಂಸದ ಡಾ.ಉಮೇಶ ಜಾಧವ ಪಾಲ್ಗೊಂಡರು
ಕಲಬುರಗಿ ತಾಲ್ಲೂಕಿನ ಹಿನ್ನ ಕಿರಣಗಿ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ನಡೆದ 14ನೇ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಚಂದ್ರಗುಂಡ ಶಿವಾಚಾರ್ಯರು ಹಾಗೂ ಸಂಸದ ಡಾ.ಉಮೇಶ ಜಾಧವ ಪಾಲ್ಗೊಂಡರು   

ಕಲಬುರಗಿ: ‘ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಶಿಕ್ಷಣ ಬಹಳ ಮುಖ್ಯ. ಆದರೆ, ಶಿಕ್ಷಣಕ್ಕಿಂತಲೂ ಮುಖ್ಯವಾದುದು ಸಂಸ್ಕಾರ. ನಮ್ಮ ಅಂತರಂಗದ ವಿಕಾಸಕ್ಕೆ ಧಾರ್ಮಿಕ ಸಂಸ್ಕಾರ ಅವಶ್ಯಕ’ ಎಂದು ಕಲ್ಯಾಣ ಕರ್ನಾಟಕ ಕೃಷಿ, ಸಾಂಸ್ಕೃತಿಕ ಹಾಗೂ ಮಾನವ ಸಂಪನ್ಮೂಲ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

ತಾಲ್ಲೂಕಿನ ಹಿನ್ನ ಕಿರಣಗಿ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 45 ದಿನಗಳವರೆಗೆ ನಡೆದ 14ನೇ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಶನಿವಾರ ಮಾತನಾಡಿದರು.

‘ಮಕ್ಕಳ ವಿಕಸನಕ್ಕೆ ಹಲವು ಮಠಗಳು ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ನೀಡುತ್ತಿವೆ. ಇಂಥ ಮಠಗಳಲ್ಲಿಚಂದ್ರಗುಂಡ ಶಿವಾಚಾರ್ಯರ ಹೊನ್ನಕಿರಣಗಿ ಮಠವೂ ಒಂದು’ ಎಂದರು.

ADVERTISEMENT

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಚಂದ್ರಗುಂಡ ಶಿವಾಚಾರ್ಯರು ಮಾತನಾಡಿ, ನಮ್ಮ ಧರ್ಮಕ್ಕೆ ಇನ್ನೊಂದು ಹೆಸರೇ ಗೋವು. ಗೋವಿನಲ್ಲಿರುವ ಸದ್ಗುಣಗಳೇ ಧರ್ಮದ ರಕ್ಷಣೆಗಳು ಎಂದು ತಿಳಿಸಿದರು.

‘ಶಿವನ ಪಂಚಮುಖದ ಪಂಚವರ್ಣ ಗೋವುಗಳಾದ ನಂದಾ, ಭದ್ರ, ಸುರಭಿ, ಸುಶೀಲ, ಸುಮನ ಗೋವುಗಳ ಗೋಪೂಜೆ ನಮ್ಮ ಸಂಸೃತಿಯ ಹೆಮ್ಮೆಯ ಪ್ರತೀಕವಾಗಿದೆ. ಗೋಮಾತೆಗಿಂತ ಮಿಗಿಲಾದ ದೈವವಿಲ್ಲ’ ಎಂದರು.

ಕಲಬುರಗಿಯಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಸಂಸದ ಡಾ.ಉಮೇಶ ಜಾಧವ ಕಾರ್ಯಕ್ರಮದಲ್ಲಿದ್ದರು.

ವಿವಿಧ ಪ್ರಶಸ್ತಿ ಪ್ರದಾನ:ಇದಕ್ಕೂ ಮುನ್ನಮಕ್ಕಳ ತಂದೆ ತಾಯಂದಿರ ಪಾದಪೂಜೆ ಮಾಡಲಾಯಿತು. ಹಿರಿಯ ಪುರೋಹಿತ ಸಾಧಕರಾದ ಭದ್ರಯ್ಯ ಸ್ವಾಮಿ ಸಾಲಿಮಠ (ಕಲಬುರಗಿ), ದೊಡ್ಡಯ್ಯ ಸ್ವಾಮಿ ನಡುಗೇರಿಮಠ (ಹೊನಗುಂಟಾ), ರೇವಣಸಿದ್ದಯ್ಯ ಸ್ವಾಮಿ ಕಲಗುರ್ತಿಮಠ, ವೀರಂತಯ್ಯ ಸ್ವಾಮಿ ಸಾಲಿಮಠ (ಇಂಗಳಿಗಿ) ಅವರಿಗೆ ‘ಹೊನ್ನ ಕಿರಣ ವೈದಿಕ ಹಿರಿಯ ಚೇತನ’ ಪ್ರಶಸ್ತಿ, ಅಂಬರೀಶ ಶಾಸ್ತ್ರಿ ಹಿರೇಮಠ (ಫರತಾಬಾದ್‌) ಹಾಗೂ ಶಿವಕುಮಾರ ಶಾಸ್ತ್ರಿ ಹಿರೇಮಠ (ಸೇಡಂ) ಅವರಿಗೆ ‘ಹೊನ್ನ ಕಿರಣ ವೈದಿಕ ಚಿಂತಾಮಣಿ ರತ್ನ’ ಪ್ರಶಸ್ತಿ, ಅಮ್ಮಯ್ಯ ಶಾಸ್ತ್ರಿ ಹಿರೇಮಠ (ಬಂಟನೂರ್) ಅವರಿಗೆ ‘ಹೊನ್ನ ಕಿರಣ ಜೋತಿಷ್ಯ ರತ್ನ’ ಪ್ರಶಸ್ತಿ, ವೀರೇಶ ಶಾಸ್ತ್ರಿ ದೇಸಾಯಿಮಠ (ಸಗರ್) ಹಾಗೂ ಪ್ರಶಾಂತ್ ಮಠಪತಿ (ಹಿರೇಜೇವರಗಿ) ಅವರಿಗೆ ‘ಹೊನ್ನ ಕಿರಣ ವೈದಿಕ ಯುವರತ್ನ’ ಪ್ರಶಸ್ತಿ, ಸಂಗಯ್ಯಸ್ವಾಮಿ ಸ್ಥಾವರಮಠ ಅವರಿಗೆ ‘ಹೊನ್ನ ಕಿರಣ ಸಂಗೀತ ರತ್ನ’ ಪ್ರಶಸ್ತಿ, ಕರಬಸಯ್ಯ ಸ್ವಾಮಿ ಅವರಿಗೆ ‘ಹೊನ್ನ ಕಿರಣ ಧರ್ಮ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಧಾರ್ಮಿಕ ಸಂಸ್ಕಾರವೆಂಬ ಶಿಬಿರದ ಶ್ಲೋಕಗಳನ್ನೊಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಕರಿಬಸವೇಶ್ವರ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಸಾಧಕಿ ಚಿನ್ನಮ್ಮ ಗುರುನಾಥ ಜುಲಫಿ (ಶೇ 95) ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಣಮಂತರಾಯ ತುಪ್ಪದ, ಶಾಂತಯ್ಯ ಡೆಂಗಿಮಠ, ಅಖಂಡಪ್ಪ ಶಿರವಾಳ, ಬಸವರಾಜ ಸಾಹು ತಿಳಗೊಳ, ವಿನೋದ್ ಬಸ್ತಾಳ, ಸಂತೋಷ್ ಶಿರವಾಳ, ಭಗವಂತರಾಯ ಕಾಬಾ ಹಾಗೂ ಅನೇಕ ಯುವಕರು ಇದ್ದರು. ದೇವರಾಜ್ ಮರ್ಕಲ್ ಸ್ವಾಗತಿಸಿದರು. ಆನಂದ ಸ್ವಾಮಿ ಕಪ್ನೂರ್ ವಂದಿಸಿದರು. ಬಸವರಾಜ ಚೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.