ADVERTISEMENT

ವಾಡಿ | ದೂಳುಮಯ ರಸ್ತೆ: ಪ್ರಾಧಿಕಾರಕ್ಕಿಲ್ಲ ಆಸ್ಥೆ

ತಾತ್ಕಾಲಿಕ ರಸ್ತೆ ನಿರ್ಮಿಸಿಕೊಡುವಲ್ಲಿ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ, ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 6:36 IST
Last Updated 28 ನವೆಂಬರ್ 2025, 6:36 IST
ಬಲರಾಮ್‌ ಚೌಕ್ ನಿಜಾಮ್ ಗೇಟ್ ಹತ್ತಿರ ವಾಹನಗಳು ಧೂಳಿನ ಮಧ್ಯೆ ಸಾಗುತ್ತಿರುವುದು
ಬಲರಾಮ್‌ ಚೌಕ್ ನಿಜಾಮ್ ಗೇಟ್ ಹತ್ತಿರ ವಾಹನಗಳು ಧೂಳಿನ ಮಧ್ಯೆ ಸಾಗುತ್ತಿರುವುದು    

ವಾಡಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 150 ನಿಜಾಮ್ ಗೇಟ್‌ನ ಎರಡು ಕಡೆ ರಸ್ತೆ ಸಂಪೂರ್ಣ ಹಾಳಾಗಿದ್ದು, ಹಾಳಾದ ರಸ್ತೆಯಿಂದ ಮೇಲೆ ಏಳುವ ಧೂಳು ವಾಹನ ಸವಾರರು ಮತ್ತು ಜನರ ಉಸಿರುಗಟ್ಟಿಸುತ್ತಿದೆ. ಧೂಳಿನಿಂದ ಜನರು ಕಂಗೆಡುತ್ತಿದ್ದು ಹೆದ್ದಾರಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಕ್ಷಣಕ್ಷಣಕ್ಕೂ ಇಲ್ಲಿ ರೈಲ್ವೆ ಗೇಟ್ ಹಾಕಲಾಗತ್ತಿದ್ದು, ತಾಸುಗಟ್ಟಲೆ ವಾಹನಗಳು ಧೂಳಿನ ಮಧ್ಯೆ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ರಸ್ತೆಗೆ ಅಡ್ಡಲಾಗಿ ಹಾಕಿರುವ ರೈಲ್ವೆ ಹಳಿಗಳು ರಸ್ತೆಗಿಂತ ಎತ್ತರವಾಗಿದ್ದು, ಹೆಜ್ಜೆಹೆಜ್ಜೆಗೂ ತೊಂದರೆ ಅನುಭವಿಸುವಂತಾಗಿದೆ.

ಬಲರಾಮ್ ಚೌಕ್‌ನಿಂದ ರೈಲ್ವೆ ಗೇಟ್‌ನ ಎರಡು ಕಡೆ 1 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು, ಹೆದ್ದಾರಿ ಪ್ರಾಧಿಕಾರವು ಕನಿಷ್ಠ ರಸ್ತೆ ದುರಸ್ತಿ ಮಾಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT
ರೈಲ್ವೆ ಹಳಿ ರಸ್ತೆಯಿಂದ ಮೇಲೆ ಎದ್ದಿದ್ದು ವಾಹನಗಳು ಸಂಕಷ್ಟ ಪಡುತ್ತಿರುವುದು

4 ವರ್ಷದಿಂದ ಸಾರ್ವಜನಿಕರು ಹದಗೆಟ್ಟ ರಸ್ತೆ ಮತ್ತು ಧೂಳಿನ ಗೋಳು ಸಹಿಸಿಕೊಂಡು ಬರುತ್ತಿದ್ದು, ಪರಿಹಾರ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ನಿತ್ಯ ಸಾವಿರಾರು ಲಾರಿಗಳು, ಸರ್ಕಾರಿ ಬಸ್‌ಗಳು, ಕಾರುಗಳು, ಟಿಪ್ಪರ್‌ಗಳು ಸೇರಿದಂತೆ ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ನಿತ್ಯ ಓಡಾಡುತ್ತವೆ.

ರಸ್ತೆ ಮೇಲ್ಸೇತುವೆ ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಕಾಮಗಾರಿ ಮುಗಿಯಲು ಕನಿಷ್ಠ 1 ವರ್ಷ ಬೇಕು. ಅಲ್ಲಿಯವರೆಗೂ ತಾತ್ಕಾಲಿಕ ರಸ್ತೆ ನಿರ್ಮಿಸಿ ಧೂಳು ಮೇಲೇಳದ ರೀತಿಯಲ್ಲಿ ಕ್ರಮ ವಹಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಮಲ್ಲಿಕಾರ್ಜುನ ಮಾಲಿಪಾಟೀಲ
ಕಳೆದ 5 ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ವಾಹನಗಳು ಓಡಾಡಲು ಕನಿಷ್ಠ ಉತ್ತಮ ರಸ್ತೆ ನಿರ್ಮಿಸದೇ ಆಡಳಿತ ಬೇಜವಾಬ್ದಾರಿ ಮಾಡುತ್ತಿದೆ
ಮಲ್ಲಿಕಾರ್ಜುನ ಮಾಲಿಪಾಟೀಲ ಬಲರಾಮ ಚೌಕ್ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.