ADVERTISEMENT

ಕಲಬುರಗಿ: ಮಲಬಾರ್‌ನಿಂದ ಹಸಿವು ಮುಕ್ತ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 14:41 IST
Last Updated 28 ಮೇ 2025, 14:41 IST
ಕಲಬುರಗಿಯ ಮಲಬಾರ್‌ ಗೋಲ್ಡ್‌ ಅಂಡ್‌ ಡೈಮಂಡ್ಸ್‌ ಮಳಿಗೆಯಲ್ಲಿ ವಿಶ್ವ ಹಸಿವು ಮುಕ್ತ ದಿನದ ಅಂಗವಾಗಿ ಬುಧವಾರ ಮಲಬಾರ್‌ನಿಂದ ನಿತ್ಯ 70 ಸಾವಿರ ಊಟ ವಿತರಿಸುವ ಗುರಿ ಹೊಂದಿರುವ ಭಿತ್ತಿಪತ್ರವನ್ನು ಗಣ್ಯರು ಅನಾವರಣಗೊಳಿಸಿದರು. ಶರಣು ಅಲ್ಲಮಪ್ರಭು ಪಾಟೀಲ, ಚನ್ನಬಸಪ್ಪ, ಶಾಮರಾವ ಸೂರನ ಸೇರಿದಂತೆ ಹಲವರು ಪಾಲ್ಗೊಂಡಿದ್ದರು

ಕಲಬುರಗಿ: ನಗರದ ಲಾಹೋಟಿ ಪೆಟ್ರೋಲ್‌ ಬಂಕ್‌ ಸಮೀಪದ ಮಲಬಾರ್‌ ಗೋಲ್ಡ್‌ ಅಂಡ್‌ ಡೈಮಂಡ್ಸ್‌ ಮಳಿಗೆಯಲ್ಲಿ ಬುಧವಾರ ವಿಶ್ವ ಹಸಿವು ಮುಕ್ತ ದಿನ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡರಾದ ಶರಣು ಅಲ್ಲಮಪ್ರಭು ಪಾಟೀಲ, ಚನ್ನಬಸಪ್ಪ, ಜೆಡಿಎಸ್‌ ಮುಖಂಡ ಶಾಮರಾವ ಸೂರನ, ಸಾಮಾಜಿಕ ಕಾರ್ಯಕರ್ತ ಸುಭಾಷ ಕಾಬಾ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಲಬಾರ್‌ ಮಳಿಗೆಯ ಕಲಬುರಗಿ ಪ್ರಾದೇಶಿಕ ಮುಖ್ಯಸ್ಥ ಮಂಜೂರ ಕೆ., ಮಾರ್ಕೆಟಿಂಗ್‌ ವಿಭಾಗದ ಅಬ್ದುಲ್‌ ಗಫೂರ್ ಸೇರಿದಂತೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

‘ಮಲಬಾರ್‌ ಗ್ರುಪ್‌ 2025-26ರಲ್ಲಿ ಸಿಎಸ್‌ಆರ್ ಉಪಕ್ರಮಗಳನ್ನು ಹೆಚ್ಚಿಸಲು ₹150 ಕೋಟಿ ಮಂಜೂರು ಮಾಡಿದೆ. 2025–26ರಲ್ಲಿ ಹಸಿವು ಮುಕ್ತ ವಿಶ್ವ ಯೋಜನೆಯಡಿ ಒಟ್ಟು 2.50 ಕೋಟಿ ಊಟ ನೀಡಲು ಯೋಜಿಸಲಾಗಿದೆ. ಕಲಬುರಗಿಯಲ್ಲಿ ನಿತ್ಯ 400 ಊಟಗಳನ್ನು ಅಗತ್ಯ ಉಳ್ಳವರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಅಂತೆಯೇ ಈಗಾಗಲೇ ಜಾಂಬಿಯಾ ಹಾಗೂ ಭಾರತದಲ್ಲಿ ಸದ್ಯ ನಿತ್ಯ 60 ಸಾವಿರ ಊಟ ಉಚಿತವಾಗಿ ಕೊಡಲಾಗುತ್ತಿದೆ. ಅದನ್ನು 70 ಸಾವಿರ ಊಟಗಳಿಗೆ ಹೆಚ್ಚಿಸಲು ಈ ವರ್ಷ ನಿರ್ಧರಿಸಲಾಗಿದೆ’ ಎಂದು ಮಲಬಾರ್‌ ಗೋಲ್ಡ್‌ ಗ್ರುಪ್‌ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.