ADVERTISEMENT

ಚಿಂಚೋಳಿ: 33 ಅಕ್ರಮ ಕಲ್ಲುಗಣಿಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 10:27 IST
Last Updated 21 ಏಪ್ರಿಲ್ 2022, 10:27 IST
ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಸುತ್ತಲಿನ ಕಲ್ಲುಗಣಿಗಳ ಮೇಲೆ ವಿವಿಧ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು.
ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಸುತ್ತಲಿನ ಕಲ್ಲುಗಣಿಗಳ ಮೇಲೆ ವಿವಿಧ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು.   

ಚಿಂಚೋಳಿ: ತಾಲ್ಲೂಕಿ‌ನ ಮಿರಿಯಾಣ ಸುತ್ತಮುತ್ತಲಿನ ಪ್ರದೇಶದಲ್ಲಿ 33ಕ್ಕೂ ಹೆಚ್ಚು ಅಕ್ರಮ ಕಲ್ಲುಗಣಿಗಳನ್ನು ಗುರುವಾರ ಪತ್ತೆ ಮಾಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಲ್ಲೂಕಿನ ವಿವಿಧೆಡೆಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಇವು ಪತ್ತೆಯಾದವು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಸತ್ಯಭಾಮಾ ಹಾಗೂ ಜೆಸ್ಕಾಂ ವಿಜಿಲೆನ್ಸ್ ತಾಂಡಾ ಸಚಿನ್ ಛಲವಾದಿ ಹಾಗೂ ಚಿಂಚೋಳಿ ಜೆಸ್ಕಾಂ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಖಂಡೆಪ್ಪ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿದರು.

ADVERTISEMENT

ಅನುಮತಿ ಇಲ್ಲದೇ ಬಳಸುತ್ತಿದ್ದ ವಿದ್ಯುತ್ತಿನ ತಂತಿ, ಇನ್ಸುಲೇಟರ್ ಸೇರಿದಂತೆ ಕೆಲವು ಪರಿಕರ ಜಪ್ತಿ ಮಾಡಿದರು.

ದಾಳಿಗೂ ಮುನ್ನ ಗಣಿ ಮಾಲೀಕರಿಗೆ ಮಾಹಿತಿಕೊಟ್ಟು ಬಂದಿದ್ದರಿಂದ ಎಲ್ಲ ಗಣಿಗಳು ಬಂದ್ ಆಗಿದ್ದವು. ಮಾಹಿತಿ ನೀಡಿ ದಾಳಿ ನಡೆಸಲು ಕಾರಣವೇನು ಎಂಬ ಪ್ರಶ್ನೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಣಾನಿ ಸತ್ಯಭಾಮ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

"ಇಲ್ಲಿ 17 ಗಣಿಗಳನ್ನು ಅನುಮತಿ ಪಡೆದು ನಡೆಸುತ್ತಿದ್ದಾರೆ. 33 ಗಣಿಗಳು ಅನಧಿಕೃತ ಎಂದು ತಿಳಿದು ಬಂದಿದೆ. ಮುಂದಿನ ಕ್ರಮ ವಹಿಸಲಾಗುವುದು" ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.