ADVERTISEMENT

ಕಲಬುರಗಿ: ಅಪ್ಪಾ ಜಾತ್ರಾ ಮೈದಾನದಲ್ಲಿನ ಒತ್ತುವರಿ ತೆರವು

ನ್ಯಾಯಾಲಯದ ಆದೇಶದಂತೆ ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಕಾರ್ಯಚರಣೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 7:51 IST
Last Updated 9 ಡಿಸೆಂಬರ್ 2025, 7:51 IST
<div class="paragraphs"><p>ಕಲಬುರಗಿಯಲ್ಲಿ ಅಪ್ಪಾ‌ ಜಾತ್ರಾ ಮೈದಾನದಲ್ಲಿ ನಡೆದ ಕಾರ್ಯಾಚರಣೆಯ ನೋಟ</p></div>

ಕಲಬುರಗಿಯಲ್ಲಿ ಅಪ್ಪಾ‌ ಜಾತ್ರಾ ಮೈದಾನದಲ್ಲಿ ನಡೆದ ಕಾರ್ಯಾಚರಣೆಯ ನೋಟ

   

ಕಲಬುರಗಿ: ನಗರದ ಹೃದಯ ಭಾಗದಲ್ಲಿರುವ ಶರಣಬಸವೇಶ್ವರರ ಜಾತ್ರಾ ಮೈದಾನದಲ್ಲಿ ಅಕ್ರಮವಾಗಿ ಒತ್ತುವರಿ‌ ಮಾಡಿ ನಿರ್ಮಿಸಿದ್ದ‌ ಶೆಡಗಳನ್ನು ಮಂಗಳವಾರ ನಗರ‌ ಪಾಲಿಕೆಯಿಂದ ತೆರವುಗೊಳಿಸಲಾಯಿತು.

ನ್ಯಾಯಾಲಯದ ಬೇಲಿಫ್‌ಗಳ ಸಮ್ಮುಖದಲ್ಲಿ ಮೂರು ಬುಲ್ಡೋಜರ್ ಬಳಸಿ ಶೆಡ್‌ಗಳನ್ನು ತೆರವುಗೊಳಿಸಲಾಯಿತು.‌ ಒತ್ತುವರಿ ತೆರವು ಕಾರ್ಯಾಚರಣೆ ‌ಅಂಗವಾಗಿ ಲಾಲಗೇರಿ‌ ಕ್ರಾಸ್‌ನಿಂದ ಶರಣಬಸವೇಶ್ವರ‌ ದೇವಸ್ಥಾನದ ಪಕ್ಕದ ದರ್ಗಾ ತನಕ ಸಂಪೂರ್ಣವಾಗಿ ವಾಹನಗಳ‌ ಸಂಚಾರ ತಡೆಯಲಾಗಿದೆ.

ADVERTISEMENT

ಕಲಬುರಗಿ ದಕ್ಷಿಣ ಉಪವಿಭಾಗದ ಎಸಿಪಿ ಶರಣಬಸಪ್ಪ ಸುಬೇದಾರ ನೇತೃತ್ವದಲ್ಲಿ 50ಕ್ಕೂ ಅಧಿಕ ಪೊಲೀಸರು ಬಿಗಿ ಬಂದೋಬಸ್ತ್ ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.