ಕಲಬುರಗಿ: ನಗರದ ಆಳಂದ ಚೆಕ್‌ಪೋಸ್ಟ್ ಸಮೀಪದ ಕೃಷಿ ಕಾಲೇಜು ಆವರಣದಲ್ಲಿ ನಡೆಯುತ್ತಿರುವ 16ನೇ ಅಂತರ ಕಾಲೇಜುಗಳ ಯುವಜನೋತ್ಸವದಲ್ಲಿ ಎರಡನೇ ದಿನವಾದ ಶನಿವಾರ ವಿದ್ಯಾರ್ಥಿಗಳು ಮಣ್ಣಿನಲ್ಲಿ ತಾಯಿ–ಮಗುವನ್ನು ಅರಳಿಸಿದರು.
ಮಣ್ಣಿನ ಕಲಾಕೃತಿ ತಯಾರಿಕೆ ಸ್ಪರ್ಧೆಗೆ ‘ತಾಯಿ ಮತ್ತು ಮಗು’ ವಿಷಯ ನೀಡಲಾಗಿತ್ತು. ಕಲಾಕೃತಿಗಳು ಗಮನಸೆಳೆದವು. ‘ವೃದ್ಧಾಶ್ರಮ ಮತ್ತು ಮೊಮ್ಮಕ್ಕಳ ಭೇಟಿ’ ವಿಷಯದ ಕುರಿತು ಏಕಪಾತ್ರಾಭಿನಯ ಸ್ಪರ್ಧೆ ನಡೆಯಿತು.
ಭಾಷಣ, ಆಶು ಭಾಷಣ ಸ್ಪರ್ಧೆಯನ್ನೂ ನಡೆಸಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಸ್ಥಳದಲ್ಲಿಯೇ ವಿಷಯ ನೀಡಿ ಅದರ ಕುರಿತು ಮಾತನಾಡುವ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಏಳು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿ ಕಲಾತ್ಮಕವಾಗಿ ರಂಗೋಲಿ ಬಿಡಿಸಿದರು. ಮಹನೀಯರ, ಪ್ರಕೃತಿಯ ಚಿತ್ರಗಳನ್ನು ರಂಗೋಲಿಯಲ್ಲಿ ಅರಳಿಸಿದರು.
ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲೂ ವಿದ್ಯಾರ್ಥಿಗಳು ಉತ್ಸಾಹ ತೋರಿಸಿದರು.
ಭಾನುವಾರ (ಡಿ.28) ನಡೆಯುವ ರಸಪ್ರಶ್ನೆ ಸ್ಪರ್ಧೆಗೆ ಪೂರ್ವಭಾವಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.