
ಪ್ರಜಾವಾಣಿ ವಾರ್ತೆ
ಕಲಬುರಗಿ: ಇತ್ತೀಚೆಗೆ ರೊಮೆನಿಯಾ ದೇಶದಲ್ಲಿ ಆಯೋಜಿಸಿದ್ದ 10ನೇ ಓನೆಕ್ಸ್ 2025ರ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ನಗರದ ಹವ್ಯಾಸಿ ಛಾಯಾಗ್ರಾಹಕ ಎಂ.ಡಿ. ಮಿಣಜಗಿ ಅವರು ಭಾಗವಹಿಸಿದ್ದರು.
‘ಹಾರಲು ಸಿದ್ಧವಾದ ಕೊಕ್ಕರೆ’ಯ ಛಾಯಾಚಿತ್ರಕ್ಕೆ ಮಿಣಜಗಿ ಅವರಿಗೆ ಫೋಟೊಗ್ರಫಿಕ್ ಸೊಸೈಟಿ ಆಫ್ ಅಮೆರಿಕ ಸೇರಿದಂತೆ ವಿವಿಧ ಸಂಘಟನೆಗಳು ರೊಮೆನಿಯಾದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ಪ್ರಮಾಣಪತ್ರ ಸಿಕ್ಕಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.