ADVERTISEMENT

ಕಲಬುರಗಿ: ಬಸ್‌ ಹತ್ತುವಾಗ ಮಹಿಳೆ ಬಳಿಯಿದ್ದ ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 8:12 IST
Last Updated 10 ಫೆಬ್ರುವರಿ 2026, 8:12 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

– ಐ ಸ್ಟಾಕ್ ಚಿತ್ರ

ಕಲಬುರಗಿ: ನಗರದ ರಾಮಮಂದಿರ ವೃತ್ತದಲ್ಲಿ ಮಹಿಳೆಯೊಬ್ಬರು ಬಸ್‌ ಹತ್ತುವಾಗ ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.

ADVERTISEMENT

ಶಹಾಬಾದ್‌ನ ಭಂಕೂರ ಗ್ರಾಮ ನಿವಾಸಿ ಸಂಗೀತಾ ಗೌರ ಚಿನ್ನಾಭರಣ ಕಳೆದುಕೊಂಡ ಮಹಿಳೆ.

‘ಕಲಬುರಗಿಯಲ್ಲಿ ಸಂಬಂಧಿಕರ ಧಾರ್ಮಿಕ ಕಾರ್ಯಕ್ರಮ ಮುಗಿಸಿಕೊಂಡು ಊರಿಗೆ ಹೋಗಲು ರಾಮಮಂದಿರಲ್ಲಿ ಬಸ್‌ ಏರಿ ಕುಳಿತೆ. ಟಿಕೆಟ್ ತೆಗೆಸಲು ನೋಡಿದಾಗ ನನ್ನ ವ್ಯಾನಿಟಿ ಬ್ಯಾಗ್‌ ಚೈನ್‌ ತೆರೆದಿತ್ತು. ಅದರಲ್ಲಿ ಇಟ್ಟಿದ್ದ ₹4.50 ಲಕ್ಷ ಮೌಲ್ಯದ 30 ಗ್ರಾಂ ಚಿನ್ನಾಭರಣಗಳು ಇರಲಿಲ್ಲ’ ಎಂದು ದೂರಿನಲ್ಲಿ ಸಂಗೀತಾ ತಿಳಿಸಿದ್ದಾರೆ.

ಈ ಕುರಿತು ಕಲಬುರಗಿ ಸ್ಟೇಷನ್‌ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.