ADVERTISEMENT

ಕಲಬುರಗಿ ಜಿಲ್ಲೆಯಲ್ಲಿ ಬಿರುಸಿನ ಮಳೆ: ಹೊಲಗಳಲ್ಲಿ ಅಪಾರ ನೀರು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 6:34 IST
Last Updated 27 ಆಗಸ್ಟ್ 2025, 6:34 IST
   

ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿಯಿಂದ ಭಾರಿ ಮಳೆ ಸುರಿಯುತ್ತಿದೆ.

ಕಲಬುರಗಿ ‌ನಗರದಲ್ಲಿ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದು, ಗಣೇಶೋತ್ಸವದ ಸಂಭ್ರಮದಲ್ಲಿರುವ ಜನತೆ ಮಳೆಯ ಮಧ್ಯೆಯೇ ಸೂಪರ್ ‌ಮಾರ್ಕೆಟ್ ನಲ್ಲಿ ಖರೀದಿ ಭರಾಟೆ ನಡೆಯುತ್ತಿದೆ.

ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಗೆ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ.

ADVERTISEMENT

ಕಲಬುರಗಿ ತಾಲ್ಲೂಕಿನ ಸೀತನೂರು, ಪಾಣೆಗಾಂವ, ಫರಹತಾಬಾದ್, ಸರಡಗಿ, ನದಿ ಸಿನ್ನೂರ, ಖಾನಿ, ಫಿರೋಜಾಬಾದ್ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ಹೊಲಗಳಲ್ಲಿ ಮಳೆಯಿಂದಾಗಿ ಕೆರೆಯಲ್ಲಿ ನಿಂತಂತೆ ನೀರು ಅಪಾರ ಪ್ರಮಾಣದಲ್ಲಿ ನಿಂತಿದೆ. ಹೆಸರು, ಉದ್ದು, ತೊಗರಿ, ಹತ್ತಿ ಬೆಳೆಗಳು ಜಲಾವೃತವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.