ADVERTISEMENT

ಕಲಬುರಗಿ | ವ್ಯಕ್ತಿ ಕೊಲೆ; ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 8:20 IST
Last Updated 8 ಅಕ್ಟೋಬರ್ 2025, 8:20 IST
ಆರೋಪಿ ಸೈಬಣ್ಣಾ ಕುಂಬಾರ
ಆರೋಪಿ ಸೈಬಣ್ಣಾ ಕುಂಬಾರ   

ಕಲಬುರಗಿ: ನಗರದ ಕುಷ್ಠರೋಗಿಗಳ ಕಾಲೊನಿಯಲ್ಲಿ ಇತ್ತೀಚೆಗೆ ನಡೆದ ಆಟೊ ಚಾಲಕ ಚಾಂದ್‌ಸಾಬ್ ಮೂಲಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸೈಬಣ್ಣಾ ಕುಂಬಾರ (25), ಸೈಬಣ್ಣ ಪುರದಾಳ (22) ಹಾಗೂ 16 ವರ್ಷದ ಬಾಲಕ ಬಂಧಿತ ಆರೋಪಿಗಳು. ಆರೋಪಿಗಳು ಕೊಲೆ ಮಾಡಿದ ಬಗೆಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಂದ್‌ಸಾಬ್‌ ಅದೇ ಕಾಲೊನಿಯ ಶಹನಾಜ್‌ ಅಲಿಯಾಸ್ ಸಾಬವ್ವ ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿತ್ತು.  ಅದೇ ಸಂದೇಹದ ಮೇಲೆ ಸಾಬವ್ವಳ ಸಹೋದರ ಸೈಬಣ್ಣಾ ಕುಂಬಾರ ಸೇರಿ ಇತರ ಇಬ್ಬರನ್ನು ಸೇರಿಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಚಾಂದ್‌ಸಾಬ್‌ ಅವರನ್ನು ಮೈಮೇಲಿನ ಬಟ್ಟೆ ಬಿಚ್ಚಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಈ ಕುರಿತು ಸೆ.20ರಂದು ನಗರದ ರಾಘವೇಂದ್ರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಸೈಬಣ್ಣಾ ಪುರದಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.