ಕಲಬುರಗಿ: ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿನ ರೌಡಿಶೀಟರ್‌ಗಳ ಮನೆ ಮೇಲೆ ಶನಿವಾರ ನಸುಕಿನ ಜಾವ ದಾಳಿ ನಡೆಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಶೋಧ ನಡೆಸಿದರು. ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಅವರ ನಿರ್ದೇಶನದಂತೆ ರೌಡಿಶೀಟರ್‌ಗಳ ಚಟುವಟಿಕೆಗಳ ಮೇಲೆ ನಿಗಾವಹಿಸಲು ಈ ದಾಳಿ ನಡೆಸಲಾಗಿದೆ.
‘ಕಲಬುರಗಿ ನಗರದಲ್ಲಿ ಒಟ್ಟು 250 ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಯಾವುದೇ ರೀತಿಯ ಆಯುಧಗಳು ಸಿಕ್ಕಿಲ್ಲ. ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗದಂತೆ ಹಾಗೂ ಸನ್ನಡತೆಯಿಂದ ಜೀವನ ನಡೆಸುವಂತೆ ಈ ಸಂದರ್ಭದಲ್ಲಿ ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಎಸಿಪಿ ದಕ್ಷಿಣ ಉಪವಿಭಾಗ ಪೊಲೀಸ್ ಠಾಣೆ ವ್ಯಾಪ್ತಿಯ 5 ರೌಡಿಶೀಟರ್‌ಗಳ ಮನೆ, ಎಸಿಪಿ ಉತ್ತರ ಉಪವಿಭಾಗ ಠಾಣೆ ವ್ಯಾಪ್ತಿಯ 7 ಮನೆ, ಎಸಿಪಿ ಸಬರ್ಬನ್ ಉಪವಿಭಾಗ ಠಾಣೆ ವ್ಯಾಪ್ತಿಯ 6, ಎಸಿಪಿ ಸಿಸಿಬಿ ಉಪವಿಭಾಗ ಠಾಣೆ ವ್ಯಾಪ್ತಿಯ 13, ಸ್ಟೇಷನ್ ಬಜಾರ್ ಠಾಣೆ ವ್ಯಾಪ್ತಿಯ 27, ಅಶೋಕ ನಗರ ಠಾಣೆ ವ್ಯಾಪ್ತಿಯ 27, ರಾಘವೇಂದ್ರ ನಗರ ಠಾಣೆ ವ್ಯಾಪ್ತಿಯ 21, ಬ್ರಹ್ಮಪೂರ ಠಾಣೆ ವ್ಯಾಪ್ತಿಯ 18, ಚೌಕ ಠಾಣೆ ವ್ಯಾಪ್ತಿಯ 21, ರೋಜಾ ಠಾಣೆ ವ್ಯಾಪ್ತಿಯ 22, ಎಂ.ಬಿ ನಗರ ಠಾಣೆ ವ್ಯಾಪ್ತಿಯ 20, ಸಬರ್ಬನ್ ಠಾಣೆ ವ್ಯಾಪ್ತಿಯ 22, ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯ 24, ಫರಹತಾಬಾದ್ ಠಾಣೆ ವ್ಯಾಪ್ತಿಯ 17 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.