ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಕಲಬುರಗಿ: ನಗರದ ಸರಾಫ್ ಬಜಾರ ಪ್ರದೇಶದ ಜೈಭವಾನಿ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿರುವ ಚಿನ್ನಾಭರಣ ತಯಾರಿಕಾ ಮಳಿಗೆ ‘ಮಲಿಕ್ ಜುವೆಲರ್ಸ್’ನಲ್ಲಿ ಶುಕ್ರವಾರ ಮಧ್ಯಾಹ್ನ ದರೋಡೆ ನಡೆದಿದೆ.
ನಾಲ್ವರ ತಂಡವು ಅಂಗಡಿಯಲ್ಲಿದ್ದ ಮಾಲೀಕನ ತಲೆಗೆ ಪಿಸ್ತೂಲ್ ಹಿಡಿದು, ಚಾಕು ತೋರಿಸಿ ಅಂದಾಜು 800 ಗ್ರಾಂ ಚಿನ್ನಾಭರಣ ದರೋಡೆ ಮಾಡಿದೆ. ಮುಖಕ್ಕೆ ಮಾಸ್ಕ್, ತಲೆಗೆ ಕ್ಯಾಪ್ ಧರಿಸಿ ಖದೀಮರು ಮಳಿಗೆಗೆ ಪ್ರವೇಶಿಸುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ದರೋಡೆ ಘಟನೆಯ ಮಾಹಿತಿ ಪಡೆದಿದ್ದಾರೆ. ಶ್ವಾನದಳ, ಬೆರಳಚ್ಚು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.
‘ಅಂದಾಜು 800 ಗ್ರಾಂನಷ್ಟು ಚಿನ್ನಾಭರಣ ದೋಚಿರುವ ಮಾಹಿತಿಯಿದೆ. ದರೋಡೆ ಪ್ರಕರಣ ಭೇದಿಸಲು ಐವರು ಹಿರಿಯ ಅಧಿಕಾರಿಗಳ ತಂಡ ರಚಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಶುಕ್ರವಾರ ಮಧ್ಯಾಹ್ನ 12ರಿಂದ 12.45ರ ನಡುವಿನ ಅವಧಿಯಲ್ಲಿ ದರೋಡೆ ನಡೆದಿದೆ. ಮಳಿಗೆ ಮಾಲೀಕರು ಅಂದಾಜು 2ರಿಂದ 3 ಕೆ.ಜಿಯಷ್ಟು ಚಿನ್ನಾಭರಣ ಕಳವಾಗಿದೆ ಎಂದು ಅಂದಾಜಿಸಿದ್ದರು. 1300 ಗ್ರಾಂ ತೂಕದ ಆಭರಣ ಅಂಗಡಿಯಲ್ಲೇ ಉಳಿದಿದೆ’ ಎಂದರು.
ಬ್ರಹ್ಮಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.