ADVERTISEMENT

ಕಲಬುರಗಿ|ಶಾಲಾ ಬಸ್– ಸಿಮೆಂಟ್ ಟ್ಯಾಂಕರ್‌ ನಡುವೆ ಅಪಘಾತ: 6 ವಿದ್ಯಾರ್ಥಿಗಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 8:29 IST
Last Updated 2 ಸೆಪ್ಟೆಂಬರ್ 2025, 8:29 IST
<div class="paragraphs"><p>ಕಲಬುರಗಿಯಲ್ಲಿ ನಡೆದ ಅಪಘಾತದಲ್ಲಿ ಶಾಲಾ ಬಸ್‌ನ ಮುಂಭಾಗದ ಗಾಜು ಒಡೆದಿರುವುದು</p></div>

ಕಲಬುರಗಿಯಲ್ಲಿ ನಡೆದ ಅಪಘಾತದಲ್ಲಿ ಶಾಲಾ ಬಸ್‌ನ ಮುಂಭಾಗದ ಗಾಜು ಒಡೆದಿರುವುದು

   

ಕಲಬುರಗಿ: ನಗರದ ಹೊರ ವಲಯದ ನಾಗನಹಳ್ಳಿ ರಿಂಗ್‌ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ 8.30ರ ಹೊತ್ತಿಗೆ ಸಿಮೆಂಟ್‌ ತುಂಬಿದ್ದ ಟ್ಯಾಂಕರ್‌ ಹಾಗೂ ಶಾಲಾ ಬಸ್‌ ನಡುವೆ ಅಪಘಾತ ಸಂಭವಿಸಿದ್ದು, ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆದಿತ್ಯ (12 ವರ್ಷ), ಪ್ರೀತಂ ನಿಂಗಣ್ಣ (6 ವರ್ಷ), ಸುಪ್ರೀತ್‌ (9 ವರ್ಷ), ಸಾಯಿನಾಥ (13), ದಕ್ಷಿತ್‌ (7 ವರ್ಷ), ವಿಕ್ರಾಂತ (14 ವರ್ಷ) ಎಂದು ಗುರುತಿಸಲಾಗಿದೆ.

ADVERTISEMENT

ಆದಿತ್ಯನನ್ನು ನಗರದ ಕಾಮರೆಡ್ಡಿ ಆಸ್ಪತ್ರೆಗೆ, ಪ್ರೀತಂನನ್ನು ಬಿಲ್ವಾ ಆಸ್ಪತ್ರೆಗೆ ಹಾಗೂ ಇನ್ನುಳಿದ ನಾಲ್ವರು ಮಕ್ಕಳನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಚಂದ್ರಕಾಂತ ಪಾಟೀಲ ಪಬ್ಲಿಕ್‌ ಶಾಲೆಗೆ ಸೇರಿದ ಶಾಲಾ ವಾಹನ ರಾಮಮಂದಿರ ಕಡೆಯಿಂದ ನಾಗನಹಳ್ಳಿ ರಿಂಗ್‌ ರಸ್ತೆಯತ್ತ ಬರುತ್ತಿತ್ತು. ವಾಡಿಯಿಂದ ಸಿಮೆಂಟ್‌ ತುಂಬಿಕೊಂಡು ಹೊರಟ್ಟಿದ್ದ ವೇಳೆ ಅಪಘಾತ ಸಂಭವಿಸಿದೆ’ ಎಂದು ಮೂಲಗಳು ಹೇಳಿವೆ.

ಅಪಘಾತದಲ್ಲಿ ಶಾಲಾ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು, ಮುಂದಿನ ಗಾಜು ಒಡೆದಿದೆ. ಈ ಕುರಿತು ಇನ್ನಷ್ಟೇ ಕಲಬುರಗಿ ನಗರ ಸಂಚಾರ ಪೊಲೀಸ್‌ ಠಾಣೆ–2ರಲ್ಲಿ ಪ್ರಕರಣ ದಾಖಲಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.