ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಸಟಪಟನಹಳ್ಳಿ ಗ್ರಾಮದಲ್ಲಿ ಕಾಗಿಣಾ ನದಿ ಪ್ರವಾಹ ನೀರು ಹೊಕ್ಕಿರುವುದು
ಸೇಡಂ (ಕಲಬುರಗಿ ಜಿಲ್ಲೆ): ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ವರುಣನ ಆರ್ಭಟ ಶನಿವಾರವೂ ಮುಂದುವರಿದಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.
ಶುಕ್ರವಾರ ರಾತ್ರಿ ಇಡಿ ಸುರಿದ ಮಳೆಯಿಂದ ತಾಲ್ಲೂಕಿನ ಕಮಲಾವತಿ ಮತ್ತು ಕಾಗಿಣಾ ನದಿ ನೀರಿನ ಪ್ರವಾಹದಲ್ಲಿ ಏರಿಕೆ ಉಂಟಾಗಿದ್ದು ನದಿ ಪಾತ್ರದ ಹೊಲಗಳಲ್ಲಿ ನೀರು ನುಗ್ಗಿದೆ.
ಇದರಿಂದ ಬೆಳೆಗಳು ಅತಿವೃಷ್ಟಿಗೆ ನೆಲಗಿದ್ದು ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ತಾಲ್ಲೂಕಿನ ಸಟಪಟನಹಳ್ಳಿ ಗ್ರಾಮದಲ್ಲಿ ಕಾಗಿಣಾ ನದಿ ನೀರಿನ ಪ್ರವಾಹ ದಿಂದ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು,
ಜೊತೆಗೆ ಮನೆಗಳಲ್ಲಿರುವ ಸಾಮಗ್ರಿಗಳನ್ನು, ದವಸ ಧಾನ್ಯಗಳನ್ನು ಎತ್ತರದ ಪ್ರದೇಶಗಳಲ್ಲಿಟ್ಟು ಮಕ್ಕಳೊಂದಿಗೆ ನೆರೆಮನೆಯವರ ಮನೆಯಲ್ಲಿ, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಜೊತೆಗೆ ತಾಲ್ಲೂಕಿನ ಕಾಚೂರ್ ಗ್ರಾಮದಲ್ಲಿ ಕೂಡ ಮನೆಗಳಿಗೆ ನೀರು ನುಗ್ಗಿದ್ದು ಜನರು ಅತಂತ್ರಕ್ಕೆ ಸಿಲುಕುವಂತಾಗಿದೆ. ಕಾಗಿಣಾ ನದಿ ನೀರಿನ ಪ್ರವಾಹದಿಂದಾಗಿ ಹಳೆಯ ಸೇತುವೆ ಮುಳುಗಡೆಯಾಗಿದ್ದು, ಮಳೆ ಉತ್ತರಾದಿ ಮಠದ ತಡೆಗೋಡೆ ನೀರು ಒಳಗಡೆ ನುಗ್ಗಿದೆ. ರಾತ್ರಿಯಿಂದ ಕಾಗಿಣಾ ನದಿ ನೀರಿನ ಪ್ರವಾಹ ಗಂಟೆಗೂ ಏರಿಕೆ ಆಗುತ್ತಿದ್ದು ಇನ್ನೂ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.