ADVERTISEMENT

ಕಲಬುರಗಿ: ಎಲ್ಲೆಡೆ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

ನಾಡದೇವತೆ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆ; ಗಣ್ಯರಿಂದ ರಾಷ್ಟ್ರಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 7:02 IST
Last Updated 2 ನವೆಂಬರ್ 2022, 7:02 IST
ಆಳಂದ ಪಟ್ಟಣದ ಮುಖ್ಯಬೀದಿಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡತಾಯಿ ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ ನಡೆಯಿತು
ಆಳಂದ ಪಟ್ಟಣದ ಮುಖ್ಯಬೀದಿಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡತಾಯಿ ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ ನಡೆಯಿತು   

ಆಳಂದ:ಜಗತ್ತಿನ ಸಮೃದ್ಧವಾದ ಭಾಷೆಗಳಲ್ಲಿ ಒಂದಾದ ಕನ್ನಡ ನಾಡು, ನುಡಿ ಬಗೆಗೆ ಪ್ರತಿಯೊಬ್ಬ ಕನ್ನಡಿಗರು ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಶಾಸಕ ಸುಭಾಷ ಆರ್.ಗುತ್ತೇದಾರ ತಿಳಿಸಿದರು.

ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ 67ನೇ ಕರ್ನಾಟಕ ರಾಜ್ಯೋತ್ಸವದ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಉಪನ್ಯಾಸಕ ಸಂಜಯ ಪಾಟೀಲ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತ ಶೇರಿ ಮಾತನಾಡಿದರು.

ADVERTISEMENT

ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷ ಚಂದ್ರಕಾಂತ ಹತ್ತರಕಿ, ಮುಖ್ಯಾಧಿಕಾರಿ ವಿಜಯ ಮಹಾಂತೇಶ್, ಡಾ.ಸಂಜಯ ರೆಡ್ಡಿ, ಬಸವರಾಜ ದೊಡ್ಡಮನಿ, ದಯಾನಂದ ಶೆರಿಕಾರ, ವಿಜಯಕುಮಾರ ಕೋಥ ಳಿಕರ್, ಮಲ್ಲಿಕಾರ್ಜುನ ಬಾಳಿ, ಪಿ.ಮಲ್ಲಿಕಾರ್ಜುನ, ಮಹಾದೇವಿ ವಚ್ಚೆ, ನಾಗಮೂರ್ತಿ ಶೀಲವಂತ, ಆದಿನಾಥ ಹೀರಾ, ಗಂಗಾಧರ ಕುಂಬಾರ, ಲಕ್ಷ್ಮಿಕಾಂತ ಉದನೂರು ಇದ್ದರು. ಕಲ್ಯಾಣಿ ಬಿಜ್ಜರಗಿ ನಿರೂಪಿಸಿದರೆ, ಜೆ.ಕೆ.ಅನ್ಸಾರಿ ವಂದಿಸಿದರು.

ಕೃಷಿ ಇಲಾಖೆಯಿಂದ ಪ್ರಗತಿಪರ ರೈತರಿಗೆ ಸನ್ಮಾನಿಸಲಾಯಿತು. ಪಟ್ಟಣದ ಹಳೆಯ ತಹಶೀಲ್ದಾರ್ ಕಚೇರಿಯಿಂದ ಮುಖ್ಯಬೀದಿಗಳಲ್ಲಿ ಕನ್ನಡತಾಯಿ ಭುವನೇಶ್ವರಿದೇವಿಯ ಭಾವಚಿತ್ರದ ಮೆರವಣಿಗೆ ಜರುಗಿತು.

ನಿಂಬರ್ಗಾ :ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ರಾಜ್ಯೋತ್ಸವ ಆಚರಣೆ ಜರುಗಿತು. ನಿಂಬರ್ಗಾ ವಿರಕ್ತಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯವಹಿಸಿದರು.

ಉಪ ತಹಶೀಲ್ದಾರ್ ಆರ್. ಮಹೇಶ ಉದ್ಘಾಟಿಸಿದರು. ಗ್ರಾ.ಪಂ ಅಧ್ಯಕ್ಷ ಸಾತಣ್ಣಾ ಮಂಟಗಿ, ಮೋಹನ್ ನಿರ್ಮಲಕರ್, ಭಾಗಣ್ಣಾ ದುಗೋಂಡ, ಬಸವರಾಜ ಯಳಸಂಗಿ, ಮಲ್ಲಿನಾಥ ನಾಟಿಕರ್, ಮಲ್ಲು ದುರ್ಗದ ಇದ್ದರು.

ಸಮತಾ ಲೋಕ ಶಿಕ್ಷಣ ಸಮಿತಿ: ಪಟ್ಟಣದ ಸಮತಾ ಲೋಕ ಶಿಕ್ಷಣ ಸಮಿತಿಯ ವಿವಿಧ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಉಪನ್ಯಾಸಕ ಮೊನ್ನಪ್ಪ ಸುತಾರ ಮಾತನಾಡಿದರು. ಮುಖ್ಯಶಿಕ್ಷಕ ಕಲ್ಲಪ್ಪ ಮಂಠಾಳೆ, ಎಲ್.ಎಸ್.ಬೀದಿ, ಶಿವಪುತ್ರಪ್ಪ ಅಲ್ದಿ, ಸುಧಾ ಚಿಲ್ಲಾಳ, ನಾಗಣ್ಣಾ ಸಲಗರೆ, ಸಂಜಯ ಪಾಟೀಲ ಇದ್ದರು.‌

ಶಾಲಾ ವಿದ್ಯಾರ್ಥಿಗಳಿಂದ ಭಾಷಣ, ನಾಡಗೀತೆ ಗಾಯನ ಜರುಗಿತು.

ಮಾದನ ಹಿಪ್ಪರಗಿ ಶಿವಲಿಂಗೇಶ್ವರ ಪದವಿ ಕಾಲೇಜಿನಲ್ಲಿ ರಾಜ್ಯೋತ್ಸವ ಆಚರಣೆ ನಡೆಯಿತು.

ಪ್ರಾಂಶುಪಾಲ ಡಾ.ಕೈಲಾಸಬಾಬು ಹೊಸಮನಿ ರಾಷ್ಟ್ರ ಧ್ವಜಾರೋಹಣ ಕೈಗೊಂಡರು.

ಶಿವಲಿಂಗಪ್ಪ ಮಾತಂಗಿ, ಶರಣಬಸಪ್ಪ ಜಿಡ್ಡಿಮನಿ, ಬಲಬೀಮ ಸಾಂಗ್ಲಿ, ಡಾ.ಶಂಕರ ಸೂರೆ, ಗೋದಾವರಿ ಪಾಟೀಲ ಸೇರಿದಂತೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.