ADVERTISEMENT

SSLC Result 2022 | ಕಲಬುರಗಿ: ಶ್ರೀಕಾಂತ ಬೆಳ್ಳೆಗೆ 625 ಅಂಕ

​ಪ್ರಜಾವಾಣಿ ವಾರ್ತೆ
Published 19 ಮೇ 2022, 9:42 IST
Last Updated 19 ಮೇ 2022, 9:42 IST
ಶ್ರೀಕಾಂತ ಬೆಳ್ಳೆ
ಶ್ರೀಕಾಂತ ಬೆಳ್ಳೆ   

ಕಲಬುರಗಿ: ಇಲ್ಲಿನ ಮಿಲೇನಿಯಂ ಶಾಲೆಯ ವಿದ್ಯಾರ್ಥಿ, ಮೂಲತಃ ಆಳಂದ ತಾಲ್ಲೂಕಿನ ಧುತ್ತರಗಾಂವ ಗ್ರಾಮದಶ್ರೀಕಾಂತ ಶ್ರೀಶೈಲ ಬೆಳ್ಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆದು ಅತ್ಯಧಿಕ ಅಂಕ ಪಡೆದವರ ಸಾಲಿಗೆ ಸೇರಿದ್ದಾನೆ.

ತಂದೆ ಶ್ರೀಶೈಲ ಬೆಳ್ಳೆ ಕಳೆದ 25 ವರ್ಷಗಳಿಂದ ಪ್ರೌಢಶಾಲಾ ಶಿಕ್ಷಕರಾಗಿದ್ದು, ಆಳಂದ ತಾಲ್ಲೂಕಿನ ಚಿತಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ತಾಯಿ ವಿಜಯಲಕ್ಷ್ಮಿ ಗೃಹಿಣಿ. ಮೂವರ ಮಕ್ಕಳ ಪೈಕಿ ಕೊನೆಯವನಾದ ಶ್ರೀಕಾಂತ ಉತ್ತಮ ಅಂಕಗಳನ್ನು ಪಡೆದಿರುವುದು ದಂಪತಿಗೆ ಖುಷಿ ತಂದಿದೆ.

‘ಅತ್ಯಧಿಕ ಅಂಕಗಳನ್ನು ಪಡೆಯುತ್ತಾನೆ ಎಂಬ ನಂಬಿಕೆಯಿತ್ತು. ಆದರೆ, ಎಲ್ಲ 625 ಅಂಕಗಳನ್ನೂ ಪಡೆಯುತ್ತಾನೆ ಎಂದುಕೊಂಡಿರಲಿಲ್ಲ. ಮಗನ ಸಾಧನೆ ಬಹಳ ಖುಷಿ ತಂದಿದೆ’ ಎಂದು ತಂದೆ ಶ್ರೀಶೈಲ ಬೆಳ್ಳೆ ಹಾಗೂ ತಾಯಿ ವಿಜಯಲಕ್ಷ್ಮಿ ‘ಪ್ರಜಾವಾಣಿ‘ಯೊಂದಿಗೆ ಖುಷಿ ಹಂಚಿಕೊಂಡರು.

ADVERTISEMENT

‘ಏಳನೇ ತರಗತಿಯಲ್ಲಿ ಶೇ 99.33 ಅಂಕಗಳನ್ನು ಪಡೆದಿದ್ದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಳ್ಳೆಯ ಮಾರ್ಕ್ಸ್‌ ಬರಬೇಕು ಎಂಬ ಉದ್ದೇಶದಿಂದ ಶಾಲೆಯಲ್ಲಿನ ತರಗತಿಗಳನ್ನು ಗಮನವಿಟ್ಟು ಕೇಳುತ್ತಿದ್ದೆ. ಟ್ಯೂಷನ್‌ಗೂ ಹೋಗುತ್ತಿದ್ದೆ. ಮನೆಗೆ ಬಂದ ಬಳಿಕ ಎರಡು ಗಂಟೆ ಓದಿನಲ್ಲಿ ತೊಡಗಿಕೊಳ್ಳುತ್ತಿದ್ದೆ. ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆರಿಸಿಕೊಂಡು ನೀಟ್ ಪರೀಕ್ಷೆ ಎದುರಿಸಿ ಎಂಬಿಬಿಎಸ್ ಮಾಡುವ ಉದ್ದೇಶವಿದೆ’ ಎಂದು ವಿದ್ಯಾರ್ಥಿ ಶ್ರೀಕಾಂತ ಖುಷಿ ಹಂಚಿಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.