ADVERTISEMENT

ಚಿಂಚೋಳಿ: ಕುಪನೂರ ಮಲ್ಲಿಕಾರ್ಜುನ ದೇವಾಲಯ ಜಲಾವೃತ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 12:20 IST
Last Updated 11 ಆಗಸ್ಟ್ 2025, 12:20 IST
<div class="paragraphs"><p>ಕುಪನೂರ ಮಲ್ಲಿಕಾರ್ಜುನ ದೇವಾಲಯ ಜಲಾವೃತ</p></div>

ಕುಪನೂರ ಮಲ್ಲಿಕಾರ್ಜುನ ದೇವಾಲಯ ಜಲಾವೃತ

   

– ಪ್ರಜಾವಾಣಿ ಚಿತ್ರ

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಸುಲೇಪೇಟ ಬಳಿಯ ಕುಪನೂರಿನಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಬಿರುಸಿನ ಮಳೆಗೆ ಪ್ರಸಿದ್ಧ ಮಲ್ಲಿಕಾರ್ಜುನ‌ ದೇವಾಲಯ ಜಲಾವೃತವಾಗಿದೆ. ಧಾರಕಾರವಾಗಿ ಸುರಿದ ಭಾರಿ‌ ಮಳೆಗೆ ಹಳ್ಳವೊಂದು ಉಕ್ಕೇರಿ ಮಳೆ ನೀರು ದೇವಾಲಯ ಆವರಿಸಿದೆ. ಜೊತೆಗೆ ದೇವಸ್ಥಾನದ ಅಕ್ಕಪಕ್ಕದಲ್ಲಿರುವ ಅಪಾರ ಪ್ರಮಾಣದ ಜಮೀನಿನಲ್ಲಿರುವ ಬೆಳೆಯೂ ಮುಳುಗಿದೆ.

ADVERTISEMENT

ತಾಲ್ಲೂಕಿನ ಕರ್ಚಖೇಡದಲ್ಲಿ ಸಿಡಿಲು ಬಡಿದು ಶಾಮರಾವ ಅವರ ನಾಲ್ಕು ಮೇಕೆಗಳು ಮೃತಪಟ್ಟಿವೆ. ಇನ್ನೂ ಎರಡು ಮೇಕೆಗಳು ಗಂಭೀರವಾಗಿ ಗಾಯಗೊಂಡಿವೆ.

ಮತ್ತೊಂದೆಡೆ ಮುಲ್ಲಾಮಾರಿ ನದಿಯಲ್ಲಿ‌ ಮಳೆಯ ನೀರು ಪ್ರವಾಹದಂತೆ ಹರಿಯುತ್ತಿದೆ. ಸುಲೇಪೇಟ, ಹೊಡೇಬೀರನಹಳ್ಳಿ, ಕುಪನೂರ, ಗಾರಂಪಳ್ಳಿ, ಹೂಡದಳ್ಳಿ, ದೇಗಲಮಡಿ, ಚಂದ್ರಂಪಳ್ಳಿ, ಐನೊಳ್ಳಿ ಸೇರಿದಂತೆ ಅನೇಕ‌ ಕಡೆ ಸೋಮವಾರ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.