ADVERTISEMENT

ಕುಪನೂರ: ಮಲ್ಲಿಕಾರ್ಜುನ ಜಾತ್ರೆ ರದ್ದು

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 6:35 IST
Last Updated 14 ಜನವರಿ 2022, 6:35 IST
ಚಿಂಚೋಳಿ ತಾಲ್ಲೂಕು ಕುಪನೂರ ಗ್ರಾಮದ ಆರಾಧ್ಯದೈವ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಭಕ್ತರ ಸಭೆಯಲ್ಲಿ ಸಬ್ ಇನ್ಸ್‌ಸ್ಪೆಕ್ಟರ್ ಸುಖಾನಂದ ಸಿಂಗೆ ಮಾತನಾಡಿದರು. ಸರ್ಕಲ ಇನ್ಸ್‌ಸ್ಪೆಕ್ಟರ್ ಜಗದೀಶ, ಉದ್ದಂಡಪ್ಪ ಹಾಗೂ ಭಕ್ತರು ಇದ್ದರು
ಚಿಂಚೋಳಿ ತಾಲ್ಲೂಕು ಕುಪನೂರ ಗ್ರಾಮದ ಆರಾಧ್ಯದೈವ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಭಕ್ತರ ಸಭೆಯಲ್ಲಿ ಸಬ್ ಇನ್ಸ್‌ಸ್ಪೆಕ್ಟರ್ ಸುಖಾನಂದ ಸಿಂಗೆ ಮಾತನಾಡಿದರು. ಸರ್ಕಲ ಇನ್ಸ್‌ಸ್ಪೆಕ್ಟರ್ ಜಗದೀಶ, ಉದ್ದಂಡಪ್ಪ ಹಾಗೂ ಭಕ್ತರು ಇದ್ದರು   

ಚಿಂಚೋಳಿ: ತಾಲ್ಲೂಕಿನ ಕುಪನೂರ ಗ್ರಾಮದ ಉದ್ಭವಲಿಂಗ ಖ್ಯಾತಿಯ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಕೋವಿಡ್ ಕಾರಣ ರದ್ದುಪಡಿಸಲು ಭಕ್ತರು ಒಪ್ಪಿಗೆ ಸೂಚಿಸಿದ್ದಾರೆ.

ಸುಲೇಪೇಟ ಸರ್ಕಲ್ ಇನ್ಸ್‌ಸ್ಪೆಕ್ಟರ್ ಕೆ.ಜಿ ಜಗದೀಶ ನೇತೃತ್ವದಲ್ಲಿ ಗ್ರಾಮದಲ್ಲಿ ಗುರುವಾರ ನಡೆದ ಭಕ್ತರ ಸಭೆಯಲ್ಲಿ ಪೊಲೀಸರ ಮನವಿ ಮೇರೆಗೆ ಭಕ್ತರು ಜಾತ್ರೆ ರದ್ದತಿಗೆ ಒಪ್ಪಿಗೆ ಸೂಚಿಸಿದರು ಎಂದು ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ ಪ್ರಜಾವಾಣಿಗೆ ತಿಳಿಸಿದರು.

ಸರ್ಕಲ್ ಇನ್ಸ್‌ಸ್ಪೆಕ್ಟರ್ ಕೆ.ಜಿ ಜಗದೀಶ, ಪೂಜೆ ವಿಧಿ ವಿಧಾನಗಳು ಸಂಪ್ರದಾಯದಂತೆ ಪೂರೈಸಲು ಯಾವುದೇ ಅಡಚಣೆಯಿಲ್ಲ ಹೀಗಾಗಿ ಭಕ್ತರು ಸಹಕರಿಸಬೇಕೆಂದು ಕೋರಿದರು. ನಂತರ ಸಬ್ ಇನ್ಸ್‌ಸ್ಪೆಕ್ಟರ್ ಸುಖಾನಂದ ಸಿಂಗೆ, ಉದ್ದಂಡಪ್ಪ ಮಾತನಾಡಿದರು.

ADVERTISEMENT

ಮಲ್ಲಿಕಾರ್ಜುನ ಸ್ವಾಮಿ, ಜಗದೇವಯ್ಯ ಸ್ವಾಮಿ, ನರಸಪ್ಪ ಮಾಸ್ತರ್. ರೇವಣಸಿದ್ದಪ್ಪ ದೊಡ್ಡಮನಿ, ದೇವೇಂದ್ರಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಚಿತ್ತಾಪುರ, ಚಂದ್ರಶೇಖರ ಹಿರೇನ್, ಶಿವಶರಣಪ್ಪ ಹಿರೇನ್, ಮಹೇಶ ಪಾಟೀಲ, ಅಣ್ಣಾರಾವ್ ಪಾಟೀಲ, ಪರಮೇಶ್ವರ ಟೆಂಗಳಿ, ಶರಣಗೌಡ, ದೇವೇಂದ್ರ ಪರ್ಕಲ್, ಹಣಮಂತ ಹೂವಿನಭಾವಿ, ಘಾಳಪ್ಪ ಕರ್ಚಖೇಡ, ಮಲ್ಲಿಕಾರ್ಜುನ ಜಮ್ಮುನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.