ADVERTISEMENT

ಶೌಚಾಲಯ ಕೊರತೆ: ಡಿಸಿಎಂ ಎದುರು ಗೋಳು ತೋಡಿಕೊಂಡ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 16:16 IST
Last Updated 24 ಫೆಬ್ರುವರಿ 2020, 16:16 IST
ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ
ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ   

ಕಲಬುರ್ಗಿ: ಇಲ್ಲಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ‌ನಾರಾಯಣ ಅವರ ಎದುರು ವಿದ್ಯಾರ್ಥಿನಿಯರು ಶೌಚಾಲಯ ‌ಸಮಸ್ಯೆಯ ಗೋಳು ತೋಡಿಕೊಂಡರು.

ನೂರಾರು ವಿದ್ಯಾರ್ಥಿನಿಯರ ಬಳಕೆಗೆ ಒಂದೇ ಶೌಚಾಲಯ ಇದೆ. ಅದೂ ಗಬ್ಬು ನಾರುತ್ತಿದೆ ಎಂದರು.
ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಕೂಡಲೇ ಹೆಚ್ಚುವರಿ ‌ಶೌಚಾಲಯ ನಿರ್ಮಿಸಿಕೊಡುವಂತೆ ಸೂಚನೆ ನೀಡಿದರು.

ಇದಕ್ಕೆ ಸಮಜಾಯಿಷಿ ‌ನೀಡಿದ ಪ್ರಾಚಾರ್ಯರು ಗುತ್ತಿಗೆದಾರನಿಗೆ ಈ ಬಗ್ಗೆ ಹೇಳಿದ್ದರೂ ಸರಿಯಾಗಿ ಮಾಡಿಲ್ಲ ಎಂದರು.

ADVERTISEMENT

ಈ ಸಮಸ್ಯೆಗೆ ನೀವೇ ಜವಾಬ್ದಾರಿ ‌ಹೊರಬೇಕು. ಕೂಡಲೇ ಕ್ರಮ ಕೈಗೊಳ್ಳಿರಿ ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.