ADVERTISEMENT

ಕಲಬುರಗಿ; ವಿವಿಧೆಡೆ ಬಾಪೂ, ಶಾಸ್ತ್ರಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 5:00 IST
Last Updated 3 ಅಕ್ಟೋಬರ್ 2022, 5:00 IST
ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಭಾನುವಾರ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು
ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಭಾನುವಾರ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು   

ಕಲಬುರಗಿ: ನಗರದ ವಿವಿಧೆಡೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಭಾನುವಾರ ಆಚರಿಸಲಾಯಿತು

ಸರ್ಕಾರಿ ಕಚೇರಿಗಳು, ರಾಜಕೀಯ ಪಕ್ಷಗಳ ಕಚೇರಿ, ಶಿಕ್ಷಣ ಸಂಸ್ಥೆಗಳು, ಸಂಘ–ಸಂಸ್ಥೆಗಳು ಸೇರಿದಂತೆ ಹಲವೆಡೆ ಬಾಪೂ ಹಾಗೂ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಇಬ್ಬರು ನಾಯಕರು ಗುಣಗಾನ ಮಾಡಲಾಯಿತು. ಸ್ವಚ್ಛತೆ ಅಭಿಯಾನ, ಸಿನಿಮಾ ಪ್ರದರ್ಶನದಂತಹ ಕಾರ್ಯಕ್ರಮಗಳು ಸಹ ಜರುಗಿದವು.

ಕಲಬುರಗಿಯ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.

ADVERTISEMENT

ಉಭಯ ನಾಯಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮಹಾಂತಪ್ಪ ಸಂಗಾವಿ, ಶರಣು ಮೋದಿ, ಭೀಮರಾವ ಟಿ.ಟಿ, ಮಜರ ಹುಸೇನ್, ಬಾಬುರಾವ ಜಾಗೀರದಾರ, ಶಿವಾನಂದ ಹೋನಗುಂಟಿ, ಲಿಂಗರಾಜ ತಾರಫೈಲ್, ಲತಾ ರಾಠೋಡ, ಈರಣ್ಣ ಝಳಕಿ, ಧರ್ಮರಾಜ ಹೇರೂರ, ಶಿವರಾಜ ಪಾಟೀಲ ಇದ್ದರು

ಟೌನ್ ಹಾಲ್‌ನಲ್ಲಿ ಇರುವ ಗಾಂಧಿ ಅವರ ಪುತ್ಥಳಿಗೆ ಮಹಾನಗರ ಪಾಲಿಕೆಯ ಉಪ ಆಯುಕ್ತ (ಆಡಳಿತ) ಪ್ರಕಾಶ ರಜಪೂತ್ ಅವರು ಮಾಲಾರ್ಪಣೆ ಮಾಡಿದರು. ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ.ಜಾಧವ, ಕಾರ್ಯನಿರ್ವಾಹಕ ಎಂಜಿನಿಯರ್ ಶಿವಣಗೌಡ ಪಾಟೀಲ, ಎಇಇ ಶಶಿಕಲಾ ಇತರರು ಇದ್ದರು.

ಮಹಾತ್ಮ ಗಾಂಧಿ ಜನ್ಮ ದಿನದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಪೂ ಭಾವಚಿತ್ರಕ್ಕೆ ತಹಶೀಲ್ದಾರ್ ಮಹಾಂತೇಶ ಮುಡಬಿ ಅವರು ಪೂಜೆ ಸಲ್ಲಿಸಿದರು. ಇದೇ ವೇಳೆ ಕಚೇರಿ ಸಿಬ್ಬಂದಿ ಸ್ವಚ್ಛತಾ ಕಾರ್ಯಕೈಗೊಂಡರು.

ಪೊರಕೆ ಹಿಡಿದು ಸಿಇಒ ಗಾಂಧಿ ಅಂಗವಾಗಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ್ ಬದೋಲೆ ಅವರು ಪೊರಕೆ ಹಿಡಿದು ಕಚೇರಿ ಆವರಣ ಸ್ವಚ್ಛಗೊಳಿಸಿದರು.

ಯೋಜನಾ ನಿರ್ದೇಶಕ ಜಗದೇವಪ್ಪ, ಮುಖ್ಯ ಲೆಕ್ಕಾಧಿಕಾರಿ ಗಾಯತ್ರಿ, ಸಹಾಯಕ ಕಾರ್ಯದರ್ಶಿ ಪ್ರಭಾಕರ ಗೊಬ್ಬೂರ, ಲೆಕ್ಕಾಧಿಕಾರಿ ಪವನ್, ವ್ಯವಸ್ಥಾಪಕ ಮಲ್ಲಿಕಾರ್ಜುನ ಇದ್ದರು.

ಸೂಪರ್ ಮಾರ್ಕೆಟ್‌ನ ಎಂಪಿಎಚ್‌ಎಸ್ ಎನ್‌ಎಸ್‌ಎಸ್‌ ವಿಶೇಷ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಹಾತ್ಮ ಗಾಂಧಿ ಹಾಗೂ ಶಾಸ್ತ್ರಿ ಜನ್ಮದಿನ ಆಚರಿಸಲಾಯಿತು. ಡಾ. ಗೌಸಿದ್ದೀನ್ ತುಮಕೂರಕರ್, ಗುರುದತ್ತ ಕುಲಕರ್ಣಿ, ಕಾಲೇಜು ಪ್ರಾಚಾರ್ಯ ಮಲ್ಲೇಶಿ ನಾಟೇಕಾರ, ಶಿಬಿರದ ಅಧಿಕಾರಿ ಡಾ.ರಾಜೇಂದ್ರ ದೋಡಮನಿ ಸಿಬ್ಬಂದಿ ಪಾಲ್ಗೊಂಡರು.

ಎಸ್‌ಬಿಆರ್‌ ಪಿಯು ಕಾಲೇಜಿನಲ್ಲಿ ಗಾಂಧಿ ಮತ್ತು ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹ ನಿರ್ದೇಶಕ(ಆಡಳಿತ) ವಿಜಯಕುಮಾರ ಜಿ.ಎಂ ಅವರು, ‘ಗಾಂಧಿ ಅವರ ಜೀವನದ ತತ್ವ, ಮೌಲ್ಯಗಳು ಹಾಗೂ ಅವರ ಮೇಲೆ ಪರಿಣಾಮ ಬೀರಿದ ಸತ್ಯ ಹರಿಶ್ಚಂದ್ರ, ಶ್ರವಣಕುಮಾರ ಹಾಗೂ ರಾಮಾಯಣ ಮಹಾಭಾರತದ ಕಥೆಗಳ ಬಗ್ಗೆ ಮಾತನಾಡಿದರು.

ವಿಭಾಗೀಯ ಪತ್ರಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ವೀರಶೆಟ್ಟಿ ಬಿ.ಜಿ, ಪ್ರಾಂಶುಪಾಲ ಎನ್.ಎಸ್. ದೇವರಕಲ್ ಇದ್ದರು. ಮಕ್ಕಳು ದಂಡಿ ಯಾತ್ರೆ ಮರುಸೃಷ್ಟಿಸಿ ಸ್ವಾತಂತ್ರ್ಯ ಹೋರಾಟಗಾರರ ವೇಷ ಧರಿಸಿದ್ದರು.

ದೊಡ್ಡಪ್ಪ ಅಪ್ಪ ವಸತಿ ವಿಜ್ಞಾನ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಇಬ್ಬರೂ ನಾಯಕರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ಪತ್ರಕರ್ತ ಶೇಷಮೂರ್ತಿ ಅವಧಾನಿ, ಪ್ರಾಚಾರ್ಯ ವಿನೋದಕುಮಾರ ಎಲ್ ಪತಂಗೆ, ಸಿಬ್ಬಂದಿ ಇದ್ದರು.

ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ವಿಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ಸರ್ವಜ್ಞ ಚಿಣ್ಣರ ಲೋಕ ಶಾಲೆಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ವಿಶೇಷ ಭಜನೆ ಮಾಡಲಾಯಿತು.

ಸಂಸ್ಥೆ ಸಂಸ್ಥಾಪಕ ಪ್ರೊ. ಚನ್ನಾರಡ್ಡಿ ಪಾಟೀಲ,ಶೈಕ್ಷಣಿಕ ನಿರ್ದೇಶಕ ಅಭಿಷೇಕ ಚನ್ನಾರಡ್ಡಿ ಪಾಟೀಲ, ಶಾಲೆಯ ಶೈಕ್ಷಣಿಕ ನಿರ್ದೇಶಕಿ ಸಂಗೀತಾ ಅಭಿಷೇಕ್ ಪಾಟೀಲ, ವಿನುತಾ ಆರ್.ಬಿ, ಪ್ರಭುಗೌಡ ಸಿದ್ದಾರೆಡ್ಡಿ, ಕರುಣೇಶ್ ಹಿರೇಮಠ, ಗುರುರಾಜ ಕುಲಕರ್ಣಿ ಇದ್ದರು.

ಇಪಿಎಫ್‌ ಕಚೇರಿ: ಆಳಂದ ರಸ್ತೆಯ ಕಾರ್ಮಿಕರ‌ ಭವಿಷ್ಯ ನಿಧಿ ಕ್ಷೇತ್ರಿಯ ಕಚೇರಿಯಲ್ಲಿ ಮಹಾತ್ಮ ಗಾಂಧಿ ಜನ್ಮ ದಿನ ಆಚರಿಸಲಾಯಿತು.
ಇದೇ ವೇಳೆ ಸ್ವಚ್ಛತಾ ಚಟುವಟಿಕೆಗಳಿಗೆ ಆಯುಕ್ತ ರವಿ ಯಾದವ ಚಾಲನೆ ನೀಡಿದರು. ಜಿ.ಎಂ ಅಪ್ಸರ್, ವಿಠ್ಠಲ, ಬಸವರಾಜ ಹೆಳವರ, ಮದನ ಕುಲಕರ್ಣಿ, ಕಲ್ಪನಾ ಮದಭಾವಿ, ಪ್ರಶಾಂತ, ಪಿ.ರಾಜಕುಮಾರ, ರಾವುಪ್ ಪಟೇಲ ಇದ್ದರು.

ರಸ್ತೆ ಸ್ವಚ್ಛತೆ: ನಗರದ ಚಂದ್ರಕಾಂತ್ ಪಾಟೀಲ ಸೆಂಟ್ರಲ್ ಶಾಲೆಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ಕರುಣೇಶ್ವರ ನಗರ ಮತ್ತು ಜೇವರ್ಗಿ ರಸ್ತೆ ಸ್ವಚ್ಛತೆ ಮಾಡಲಾಯಿತು. ಶಾಲೆಯ ಮುಖ್ಯಶಿಕ್ಷಕಿ ಅರುಣಾ ಜೆ ಸಿ, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪಿಯು ವಿಜ್ಞಾನ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪ್ರಾಂಶುಪಾಲ ಡಾ. ಭುರ್ಲಿ ಪ್ರಹ್ಲಾದ್ ಪೂಜೆ ಸಲ್ಲಿಸಿದರು.

ನಗರದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಬಾಪೂ ಹಾಗೂ ಶಾಸ್ತ್ರಿ ಜನ್ಮ ದಿನಾಚರಣೆ ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷೆ ಸುವರ್ಣಾ ಭಗವತಿ, ಶಿಕ್ಷಕರಾದ ನಿಖಿಲ್ ಪಾಟೀಲ, ಮಲ್ಲಿಕಾರ್ಜುನ ಜವಳಗಿ, ಶ್ರೀದೇವಿ ಹಿರೇಮಠ ಇದ್ದರು. ಇದೇ ವೇಳೆ ‘ಗಾಂಧಿ’ ಚಲನ ಚಿತ್ರ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.