ADVERTISEMENT

ಕಲಬುರಗಿ | ವೈದ್ಯ ವಿದ್ಯಾರ್ಥಿನಿ‌ ಕೊಲೆ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 13:18 IST
Last Updated 19 ಆಗಸ್ಟ್ 2024, 13:18 IST
<div class="paragraphs"><p>ಕಲಬುರಗಿಯಲ್ಲಿ‌ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು</p></div>

ಕಲಬುರಗಿಯಲ್ಲಿ‌ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು

   

ಕಲಬುರಗಿ: ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ‌ ಮೇಲಿನ ಅತ್ಯಾಚಾರ ಹಾಗೂ‌ ಕೊಲೆ ಖಂಡಿಸಿ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ನೇತೃತ್ವದಲ್ಲಿ ನಗರದ‌ ವಿವಿಧ ವೈದ್ಯಕೀಯ ಕಾಲೇಜು ಹಾಗೂ ನರ್ಸಿಂಗ್ ಕಾಲೇಜುಗಳ ನೂರಾರು ‌ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದರು.

ನಗರದ ಅನ್ನಪೂರ್ಣ ಕ್ರಾಸ್ ನಿಂದ ಆರಂಭವಾದ‌ ಪ್ರತಿಭಟನೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ತನಕ ಪ್ರತಿಭಟನಾ ಜಾಥಾ ನಡೆಸಿದರು.

ADVERTISEMENT

'ಭಾಷಣ ಬಿಡಿ, ಗಲ್ಲು ಶಿಕ್ಷೆ ಕೊಡಿ', 'ನೋ ಸೇಫ್ಟಿ ನೋ‌ ಡ್ಯೂಟಿ', 'ಬೇಕೆ ಬೇಕೆ ನ್ಯಾಯ ಬೇಕು', 'ಏಕ್, ದೋ ತೀನ್ ಚಾರ್ ಬಂದ್ ಕರೊಯೇ ಅತ್ಯಾಚಾರ' ಘೋಷಣೆ ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ದಾರ್ ಪಟೇಲ್ ವೃತ್ತ ದಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನಗಳ ಸಂಚಾರ ತಡೆದ ಪ್ರತಿಭಟನಾಕಾರರು, ಕೋಲ್ಕತ್ತದ ವಿದ್ಯಾರ್ಥಿನಿ ಜೊತೆಗೆ ನಡೆದ ದೌರ್ಜನ್ಯ, ಕೊಲೆ ಘಟನೆಯ ಹೋಲುವ ರೂಪಕ ಸೃಷ್ಟಿಸಿ ನೆರೆದಿದ್ದವರಿಗೆ ಘಟನೆಯ ತೀವ್ರತೆ ‌ಮನವರಿಕೆ‌ ಮಾಡಲು ಯತ್ನಿಸಿದರು. ಬಳಿಕ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೊಂಬತ್ತಿ ಬೆಳಗಿ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ‌ ಕಚೇರಿ ಸಿಬ್ಬಂದಿಗೆ ಮನವಿ‌ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.