ಅಫಜಲಪುರ: ‘ವಿದ್ಯಾರ್ಥಿಗಳಿಗೆ ಗುಣಮಟ್ಟದ ಪದವಿ ಶಿಕ್ಷಣ ನೀಡಲು ಅಗತ್ಯವಿರುವ ಮೂಲಸೌಲಭ್ಯ ಕಲ್ಪಿಸಲು ಹೆಚ್ಚಿನ ಅನುದಾನ ಒದಗಿಸಿದ್ದೇನೆ. ಪ್ರಾಧ್ಯಾಪಕರು ನಿಗದಿತ ಸಮಯದಲ್ಲಿ ಕಾಲೇಜಿನಲ್ಲಿದ್ದು, ತರಗತಿಗಳನ್ನು ನಡೆಸಬೇಕು’ ಎಂದು ಪ್ರಾಚಾರ್ಯ ಮಾಣಿಕರಾವ ಕುಲಕರ್ಣಿಗೆ ಸೂಚಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶಾಸಕ ಎಂ.ವೈ. ಪಾಟೀಲ್ ಧಿಡೀರ್ ಭೇಟಿ ನೀಡಿ, ಪ್ರಾಧ್ಯಾಪಕರು ಹಾಗೂ ಪ್ರಾಚಾರ್ಯರ ನಡುವಿನ ಸಮನ್ವಯದ ಕೊರತೆಯಿಂದ ತರಗತಿಗಳು ನಡೆಯುತ್ತಿಲ್ಲ ಎಂದು ದೂರುಗಳು ಬರುತ್ತಿವೆ. ಹೀಗಾದರೆ ಕಾಲೇಜಿನ ವಾತಾವರಣವೇ ಕಲುಷಿತಗೊಂಡಿರುವಂತೆ ಭಾಸವಾಗುತ್ತಿದೆ. ಕಾಲೇಜು ಅವಧಿ ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ಇದೆ. ಆದರೆ ಸಮಯ 2 ಗಂಟೆಯಾಗಿದೆ. ವಿದ್ಯಾರ್ಥಿಗಳಿಲ್ಲ. ಹೀಗಾದರೆ ಕಾಲೇಜು ನಡೆಸುವುದು ಹೇಗೆ? ತರಗತಿಗಳು ನಡೆಯದೆ ಇರುವುದರಿಂದ ಪ್ರಸ್ತುತ ವರ್ಷ ವಿದ್ಯಾರ್ಥಿಗಳ ಪ್ರವೇಶಾತಿ ಕುಸಿದಿದೆ’ ಎಂದು ಅಸಮಧಾನ ವ್ಯಕ್ತಪಡಿಸಿದರು.
‘ಪ್ರಾಧ್ಯಾಪಕರು ನನಗೆ ವೈಯಕ್ತಿಕವಾಗಿ ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ತಿಳಿಸಬೇಕು. ನಾನು ಮತ್ತೊಮ್ಮೆ ಬರುವುದರೊಳಗೆ ಕಾಲೇಜಿನ ವಾತಾವರಣ ಬದಲಾಗಿರಬೇಕು’ ಎಂದು ತಿಳಿಸಿದರು .
ತಹಶೀಲ್ದಾರ್ ಸಂಜುಕುಮಾರ ದಾಸರ, ಕಾಲೇಜು ಸುಧಾರಣಾ ಮಂಡಳಿ ಉಪಾಧ್ಯಕ್ಷ ಪ್ರಕಾಶ ಜಮಾದಾರ, ತಾ.ಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಗಾಡಿಸಾಹುಕಾರ, ತಾ.ಪಂ ಮಾಜಿ ಸದಸ್ಯ ಸುಭಾಷ ರೂಗಿ, ಪ್ರಾಚಾರ್ಯ ಮಾಣಿಕರಾವ ಕುಲಕರ್ಣಿ, ಪ್ರಾಧ್ಯಾಪಕರಾದ ಎಂ.ಎಸ್.ರಾಜೇಶ್ವರಿ, ಸೂಗುರೇಶ್ವರ ಮಠ, ದತ್ತಾತ್ರೇಯ ಮಾಡಿಯಾಳ, ಶ್ರೀದೇವಿ ರಾಠೋಡ, ಸೂರ್ಯಕಾಂತ, ಮಹಮ್ಮದ ಯುನೂಸ್, ಶಾಂತಲಾ, ಭಾರತಿ ಬುಸಾರೆ ಮುತ್ತಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.