ADVERTISEMENT

₹ 200 ಕೋಟಿ ಅನುದಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:21 IST
Last Updated 24 ಫೆಬ್ರುವರಿ 2026, 7:21 IST
ವಿಧಾನಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು
ವಿಧಾನಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು   

ಕಲಬುರಗಿ: ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ ₹ 200 ಕೋಟಿ ಅನುದಾನ ನೀಡಬೇಕು. ವಿಧಾನಸೌಧದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿ ನಿರ್ಮಾಣ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. 

ಮುಖ್ಯಮಂತ್ರಿ ವಿಧಾನಸೌಧದಲ್ಲಿ ಸೋಮವಾರ ಕರೆದಿದ್ದ ಹಿಂದುಳಿದ ವರ್ಗಗಳ ಶಾಸಕರ ಬಜೆಟ್‌ ಪೂರ್ವ ಸಭೆಯ ಬಳಿಕ ಭೇಟಿ ಮಾಡಿದ ಜಗದೇವ ಗುತ್ತೇದಾರ ಅವರು, ಸೇಂದಿ ನಿಷೇಧಕ್ಕೊಳಗಾದ ಕಾರ್ಮಿಕರಿಗೆ, ಈಡಿಗ ಸೇರಿ 26 ಪಂಗಡಗಳಿಗೆ, ಟ್ರೀ ಫಾರ್‌ ಟ್ಯಾಪರ್ಸ್‌ ವ್ಯವಸ್ಥೆಯನ್ನು ಜಾರಿಗೊಳಿಸಲು, ರಾಜ್ಯದಲ್ಲಿ ಎಂಎಸ್ಐಎಲ್‌ ಮಳಿಗೆಗಳಲ್ಲಿ ಕಾರ್ಮಿಕರಿಗೆ ಕೆಲಸ ಕೊಡಲು ಮತ್ತು ಎಂಎಸ್‌ಐಎಲ್‌ ಮಳಿಗೆಗಳನ್ನು ಈಡಿಗ ಸಮುದಾಯದವರಿಗೆ ಮೀಸಲಿಡಲು ಹಾಗೂ ಹೆಂಡದ ಮಾರಯ್ಯನವರ ಮತ್ತು ಈಡಿಗ ಅಕ್ಕಮ್ಮನವರ ಜಂಟಿ ಅಧ್ಯಯನ ಪೀಠ ಆರಂಭಿಸಲು ಹಾಗೂ ಹೆಂಡದ ಮಾರಯ್ಯ ಮತ್ತು ಈಡಿಗರ ಅಕ್ಕಮ್ಮನ ಸ್ಮಾರಕಗಳ ಅಭಿವೃದ್ಧಿಗೆ ತಲಾ ₹ 5 ಕೋಟಿ ಬಿಡುಗಡೆ ಮಾಡುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT