ಚಿಂಚೋಳಿ ಪಟ್ಟಣದ ಐತಿಹಾಸಿಕ ಬಡಿದರ್ಗಾದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ಅಲಾಯಿ ಪೀರಾಗಳನ್ನು ಎಬ್ಬಿಸಿ ಭಾನುವಾರ ಮೆರವಣಿಗೆ ನಡೆಸಿದರು
ಚಿಂಚೋಳಿ: ಮಹಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಸನ್ ಮತ್ತು ಹುಸೇನ್ ಅವರ ಬಲಿದಾನ ಸ್ಮರಿಸುವ ಮೊಹರಂ ಭಕ್ತಿಯಿಂದ ಆಚರಿಸಿದರು. ಪಟ್ಟಣದ ಬಡಿ ದರ್ಗಾದಲ್ಲಿ ಸಜ್ಜಾದ್‌ರಾದ ಸಯ್ಯದ್ ಅಕ್ಬರ್ ಹುಸೇನಿ ನೇತೃತ್ವದಲ್ಲಿ ಭಾನುವಾರ ಆಚರಿಸಲಾಯಿತು.
ಪಟ್ಟಣದ ಛೋಟಿ ದರ್ಗಾ, ಬಡಿ ದರ್ಗಾ, ಮದರಸಾಬ್ ದರ್ಗಾ, ಮೋಮಿನಪುರ, ಮಹಿಬೂಬ ಸುಭಾನಿ ದರ್ಗಾ ಸೇರಿದಂತೆ ವಿವಿಧೆಡೆ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿಗಳನ್ನು ಮೊಹರಂ ಕಡೆಯ ದಿನದಂದು ಎಬ್ಬಿಸಲಾಯಿತು. ಸಂಪ್ರದಾಯದಂತೆ ಬಡಿ ದರ್ಗಾದಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿಗಳಿಗೆ ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಅಲಾಯಿಗಳು ಮೆರವಣಿಗೆಯಲ್ಲಿ ಬಂದು ದರ್ಶನ ಪಡೆದು ಕುಶಲೋಪರಿ ವಿಚಾರಿಸಿದ ರೀತಿಯಲ್ಲಿ ಉತ್ಸವ ಆಚರಿಸಲಾಯಿತು.
ದರ್ಶನಕ್ಕೆ ಬಂದ ಅಲಾಯಿಗಳಿಗೆ ಲೋಬಾನ್ ಹಾಕಿ ಹೊಗೆ ಎಬ್ಬಿಸಿ ದೇವರ ಧ್ಯಾನ ಮಾಡಿ ಬೀಳ್ಕೊಡಲಾಯಿತು. ಬಡಿದರ್ಗಾದ ಅಲಾಯಿಗಳು ಎಬ್ಬಿಸಿ ಹೊರ ತಂದಾಗ ಅವುಗಳಿಗೆ ಹೂವು ಏರಿಸಿ ಮೆರವಣಿಗೆಗೆ ದರ್ಗಾದ ಸಜ್ಜಾದರು ಚಾಲನೆ ನೀಡಿದರು. ಕೆ.ಎಂ.ಬಾರಿ, ಅಬ್ದುಲ್ ಬಾಷೀತ್, ಮಕದುಮ್ ಖಾನ್ ಕೈಜೋಡಿಸಿದರು.
ಪಟ್ಟಣದ ಹಲವು ಕಡೆ ಪ್ರತಿಷ್ಠಾಪಿಸಿದ್ದ ಅಲಾಯಿಗಳನ್ನು ಹಿಂದೂಗಳೇ ಹಿಡಿದು ಬಡಿ ದರ್ಗಾಕ್ಕೆ ಬಂದರೆ, ಬಡಿ ದರ್ಗಾದಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿಗಳನ್ನು ಎಬ್ಬಿಸಿ ಮೆರವಣಿಗೆಯಲ್ಲಿ ತಂದರು.
ಉತ್ಸವದಲ್ಲಿ ಹಿರಿಯ ಮುಖಂಡ ಗೋಪಾಲರಾವ್ ಕಟ್ಟಿಮನಿ, ಆರ್ ಗಣಪತರಾವ್, ನರಸರೆಡ್ಡಿ ಕಿವಣೋರ್, ಶ್ರೀಕಾಂತ ಜಾನಕಿ, ಭೀಮಾಶಂಕರ ಕಳಸ್ಕರ್, ಶಾಮರಾವ್ ನಾಟಿಕಾರ, ಶ್ರೀಕಾಂತ ನಾಟಿಕಾರ, ಸುಬ್ಬಣ್ಣ ತೋಡಿ, ಜಗನ್ನಾಥ ನಾಟಿಕಾರ, ಮಹೇಶ ಘಾಲಿ, ಸಯ್ಯದ್ ಶಬ್ಬೀರ್ ಅಹಮದ್, ಎಫ್.ಎಂ ಹಾಷ್ಮೀ, ಎಸ್.ಕೆ.ಮುಕ್ತಾರ್, ಅಸ್ಲಂ ಪಟೇಲ್, ಮಂಜಲೆಸಾಬ್ ಮುತ್ತಂಗಿ, ಹಾಫೀಜ್ ಅಬ್ದುಲ್ ಹಮೀದ್, ಬಸವರಾಜ ವಾಡಿ, ಅನ್ಸರ್ ಅಲಿ, ಅಕ್ಬರ್ ಅಲಿ ಸೇರಿದಂತೆ ಮೊದಲಾದವರು ಇದ್ದರು.
ಸರ್ಕಲ್ ಇನ್‌ಸ್ಪೆಕ್ಟರ್ ಕಪಿಲದೇವ, ಪಿಎಸ್‌ಐ ಗಂಗಮ್ಮಾ ಜಿನಿಕೇರಿ ನೇತೃತ್ವದಲ್ಲಿ ಪೊಲೀಸರು ಹಾಗೂ ಗೃಹರಕ್ಷರು ಬಂದೋಬಸ್ತ್ ಕೈಗೊಂಡಿದ್ದರು. ಮೊಹರಂ ಆಚರಣೆಯಲ್ಲಿ ಚಿಂಚೋಳಿ, ಚಂದಾಪುರ ಮತ್ತು ನೀಮಾಹೊಸಳ್ಳಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೊಹರಂ ಆಚರಣೆ ಹಿನ್ನೆಲೆಯಲ್ಲಿ ಕೆಲವರು (ಉಪವಾಸ)ರೋಜಾ ನಡೆಸಿದರು.
ತಾಲ್ಲೂಕಿನ ಮರನಾಳ್‌ದ ಕರ್ಬಲಾದಲ್ಲಿ ಮೊಹರಂ ಭಕ್ತಿಶ್ರದ್ಧೆಯಿಂದ ಭಾನುವಾರ ನಡೆಸಿದರು. ತಾಲ್ಲೂಕಿನ ಕುಪನೂರ, ಬೆನಕನಳ್ಳಿ, ಭಂಟನಳ್ಳಿ, ಸುಲೇಪೇಟ ಹಾಗೂ ಹೊಡೇಬೀರನಹಳ್ಳಿ ಗ್ರಾಮಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ಪೀರಾಗಳು ಮೆರವಣಿಗೆಯೊಂದಿಗೆ ಕಾಲ್ನಡಿಗೆಯಲ್ಲಿ ಮರನಾಳ್‌ದ ಕರ್ಬಲಾಗೆ ಬಂದು ದರ್ಗಾದಲ್ಲಿ ಕೆಲ ಹೊತ್ತು ವಿರಮಿಸಿ ವಿವಿಧ ಧಾರ್ಮಿಕ ಕೈಂಕರ್ಯ ಪೂರೈಸಿ ಮರಳಿದವು.
ಕಲ್ಲಾರೆಡ್ಡಿ, ಮೈನುದ್ದಿನ್ ಅಜಮೀರ್, ಅಲಿಮೊದ್ದಿನ್ ಪಟೇಲ್, ವಿನೋಂದ ಓಂಕಾರ, ಮಿನಾಜ್ ಪಟೇಲ್, ರುದ್ರಮುನಿ ರಾಮತೀರ್ಥಕರ್, ಖಮರುದ್ದಿನ್ ಪಟೇಲ್, ಭೀಮಾಶಂಕರ, ಮೌಲಾಸಾಬ್, ಅಸ್ಲಂ ಪಾಷಾ, ಜಮೀರ್, ಸತ್ತಾರ್‌ಸಾಬ್, ಪ್ರಕಾಶ ಗುತ್ತೇದಾರ, ಶಕೀಲ ಮೊದಲಾದವರು ಇದ್ದರು.
ಮರನಾಳ್ ಕರ್ಬಲಾದಲ್ಲಿ ಮೊಹರಂ
ಚಿಂಚೋಳಿ: ತಾಲ್ಲೂಕಿನ ಮರನಾಳ್‌ದ ಕರ್ಬಲಾದಲ್ಲಿ ಮೊಹರಂ ಉತ್ಸವವನ್ನು ಭಕ್ತಿಶ್ರದ್ಧೆಯಿಂದ ಭಾನುವಾರ ನಡೆಸಿದರು. ತಾಲ್ಲೂಕಿನ ಕುಪನೂರ, ಬೆನಕನಳ್ಳಿ, ಭಂಟನಳ್ಳಿ, ಸುಲೇಪೇಟ ಹಾಗೂ ಹೊಡೇಬೀರನಹಳ್ಳಿ ಗ್ರಾಮಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ಪೀರಾಗಳು ಮೆರವಣಿಗೆಯೊಂದಿಗೆ ಕಾಲ್ನಡಿಗೆಯಲ್ಲಿ ಮರನಾಳ್‌ದ ಕರ್ಬಲಾಗೆ ಬಂದು ದರ್ಗಾದಲ್ಲಿ ಕೆಲ ಹೊತ್ತು ವಿರಮಿಸಿ ವಿವಿಧ ಧಾರ್ಮಿಕ ಕೈಂಕರ್ಯ ಪೂರೈಸಿ ಮರಳಿದವು.
ಕಲ್ಲಾರೆಡ್ಡಿ, ಮೈನುದ್ದಿನ್ ಅಜಮೀರ್, ಅಲಿಮೊದ್ದಿನ್ ಪಟೇಲ್, ವಿನೋಂದ ಓಂಕಾರ, ಮಿನಾಜ್ ಪಟೇಲ್, ರುದ್ರಮುನಿ ರಾಮತೀರ್ಥಕರ್, ಖಮರುದ್ದಿನ್ ಪಟೇಲ್, ಭೀಮಾಶಂಕರ, ಮೌಲಾಸಾಬ್, ಅಸ್ಲಂ ಪಾಷಾ, ಜಮೀರ್, ಸತ್ತಾರ್‌ಸಾಬ್, ಪ್ರಕಾಶ ಗುತ್ತೇದಾರ, ಶಕೀಲ ಮೊದಲಾದವರು ಇದ್ದರು.
ಮೊಹರಂ ಹಬ್ಬಕ್ಕೆ ಸಂಭ್ರಮದ ತೆರೆ
ಕಾಳಗಿ: ತಾಲ್ಲೂಕಿನಲ್ಲಿ ಜೂನ್ 27ರಿಂದ ಪ್ರಾರಂಭವಾದ ಹಿಂದೂ-ಮುಸ್ಲಿಂ ಭಾವೈಕ್ಯದ ಮೊಹರಂ ಹಬ್ಬ ಭಾನುವಾರ (ಜು.6) ರಾತ್ರಿ ಸಂಭ್ರಮದಿಂದ ತೆರೆ ಕಂಡಿತು.
ಲಕ್ಷ್ಮಣನಾಯಕ್ ತಾಂಡಾದ ಬಾಬಾಸಾಹೇಬ್ ಗುಡ್ಡದಲ್ಲಿ ಮೆಟ್ಟಿಲು ಹತ್ತುವ ಮತ್ತು ಬೆಂಕಿ ಕೆಂಡ ಹಾಯುವ ಭರತನೂರ ಪೀರ್ ಹಾಗೂ ಇಡೀ ಊರೆ ಮದ್ಯಮುಕ್ತವಾಗಿ ಆಚರಿಸುವ ಕೋರವಾರ ಗ್ರಾಮದ ಮೊಹರಂ ಹಬ್ಬ ಅಪಾರ ಜನರ ಶ್ರದ್ಧಾ-ಭಕ್ತಿಗೆ ಸಾಕ್ಷಿಯಾಯಿತು.
ಪಟ್ಟಣದಲ್ಲಿ ವಿವಿಧ ಮಸೀದಿ, ದರ್ಗಾಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪೀರ್ (ಪಂಜಾ)ಗಳನ್ನು ಹಸಿರು ಅಂಗಿ ಧರಿಸಿ ಸವಾರಿ ತುಂಬಿದ್ದ ನಿರ್ಧಿಷ್ಟ ಕೆಲಜನರು ಪಂಜಾ, ಡೋಲಿಯನ್ನು ಹೊತ್ತು ಸಾಗಿದರು.
ಜನ ಲೋಬಾನ ಹಾಕಿ ಭಕ್ತಿ ಅರ್ಪಿಸಿದರು. ಬಜಾರ್ ರಸ್ತೆ, ಮುತ್ಯಾನಕಟ್ಟೆ, ಹಿರೇಮಠ ಮಾರ್ಗವಾಗಿ ಸಾಗಿದ ಮೆರವಣಿಗೆಯು ನೀಲಕಂಠ ಕಾಳೇಶ್ವರ ನೀರಿನ ಬುಗ್ಗಿಗೆ ತಲುಪಿ ಮುಕ್ತಾಯಗೊಂಡಿತು.
ಯುವಕರು ಹಲಗೆ, ತಾಶಾದ ಸಪ್ಪಳಕ್ಕೆ ಬಾರುಕೋಲಿನ ಮಜಮಾ ಆಡಿದರು. ಕೊನೆಯಲ್ಲಿ ಪೀರಾಗಳ ದಫಾನ್ ಮಾಡಲಾಯಿತು.
ಇದಕ್ಕೂ ಮುಂಚೆ ಶುಕ್ರವಾರ, ಶನಿವಾರ ಕಾಳಗಿ-ಮಲಘಾಣ ನಡುವಿನ ಹಜರತ್ ಶಹಾಹುಸೇನ್ ದರ್ಗಾದ ಪಂಜಾ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.