ಮಂಗನ ದಾಳಿಗೆ ಗಾಯಗೊಂಡಿದ್ದ ವ್ಯಕ್ತಿಯ ಕೈಗೆ ಬ್ಯಾಂಡೇಜ್ ಕಟ್ಟಿರುವುದು ಹಾಗೂ ಮತ್ತೊಂದು ಚಿತ್ರದಲ್ಲಿ ಮಂಗ (ಸಾಂದರ್ಭಿಕ ಚಿತ್ರ)
ಚಿತ್ತಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಬುಧವಾರ ಸಂಜೆಯಿಂದ ಗುರುವಾರ ಬೆಳಗಿನವರೆಗೆ ಮಂಗವೊಂದು ದಾಳಿ ಮಾಡಿ ಹಲವರನ್ನು ಗಂಭೀರವಾಗಿ ಗಾಯಗೊಳಿಸಿದೆ.
ಗ್ರಾಮದ ನೀಲಮ್ಮ ದತ್ತು ಹೂಗಾರ, ಅಪ್ಪು ಪ್ರಕಾಶ ಕೋಡ್ಲಿ, ಮಹ್ಮದ್ ಫಾರೂಕ್ ಗೌಸ್ ಪಟೇಲ್ ಹೊನ್ನಳ್ಳಿ ಅವರ ಮೇಲೆ ಮಂಗವು ಏಕಾಏಕಿ ದಾಳಿ ಮಾಡಿ ಕಾಲಿನ ಮಾಂಸಖಂಡ ಕಿತ್ತು ಬರುವಂತೆ ಕಚ್ಚಿದೆ.
ಮಂಗನ ದಾಳಿಯಿಂದ ಗಾಯಗೊಂಡಿರುವವರನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
'ಮಂಗಕ್ಕೆ ಹುಚ್ಚು ಹಿಡಿದಂತಿದೆ. ಹೀಗಾಗಿ ದಾಳಿ ಮಾಡಿ ಕಚ್ಚುತ್ತಿದೆ. ಗ್ರಾಮಸ್ಥರು ಬಡಿಗೆ ಹಿಡಿದು ಮಂಗವನ್ನು ಬೆನ್ನಟ್ಟಿದಾಗ ಅಡವಿಯತ್ತ ಹೋಗಿ ಪುನಃ ಗ್ರಾಮದಲ್ಲಿನ ಮಂಗಗಳ ಗುಂಪಿಗೆ ಬಂದು ಸೇರಿಕೊಳ್ಳುತ್ತಿದೆ. ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ' ಎಂದು ಗ್ರಾಮಸ್ಥರು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
'ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮಕ್ಕೆ ಬಂದು ಜನರ ದಾಳಿ ಮಾಡುತ್ತಿರುವ ಮಂಗವನ್ನು ಕೂಡಲೇ ಸೆರೆ ಹಿಡಿದು ಸ್ಥಳಾಂತರಿಸಬೇಕು' ಎಂದು ಗ್ರಾಮದ ಈರಣ್ಣಾ ಕೋಳಕೂರ, ಜಗನ್ನಾಥ, ಮೈನೋದ್ದಿನ್ ತೊನಸನಳ್ಳಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.