ADVERTISEMENT

ಎಂಎಸ್‌ಎಂಇ ಸಾಲ: ಆರ್‌ಬಿಐಗೆ ಪತ್ರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 13:51 IST
Last Updated 9 ಜೂನ್ 2020, 13:51 IST

ಕಲಬುರ್ಗಿ: ಕೇಂದ್ರ ಹಣಕಾಸು ಸಚಿವರು ಎಂ.ಎಸ್‌.ಎಂ.ಇ. ಘಟಕಗಳ ಪುನರುಜ್ಜೀವನಕ್ಕೆ ₹20 ಸಾವಿರ ಕೋಟಿ ಪ್ಯಾಕೇಜ್‌ ನೀಡಿದ್ದು, ಇದರ ಅನುಷ್ಠಾನಕ್ಕೆ ಬ್ಯಾಂಕ್‌ಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಹೈದರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಅಮರನಾಥ ಸಿ.ಪಾಟೀಲ, ಗೌರವ ಕಾರ್ಯದರ್ಶಿ ಶಶಿಕಾಂತ ಬಿ.ಪಾಟೀಲ ಅವರು ಭಾರತೀಯ ರಿಸರ್ವ ಬ್ಯಾಂಕ್‌ಗೆ ಪತ್ರ ಬರೆದಿದ್ದಾರೆ.

‘ಕೇಂದ್ರ ಸರ್ಕಾರದ ಗ್ಯಾರಂಟಿ ಆಧರಿಸಿ ಸಾಲ ಮಂಜೂರಾತಿಗೆ ಈ ಪ್ಯಾಕೇಜ್‌ನಲ್ಲಿ ಅವಕಾಶ ಇದೆ. ಆದರೆ, ಸಾಲಕ್ಕೆ ಬ್ಯಾಂಕ್‌ಗಳನ್ನು ಸಂಪರ್ಕಿಸಿದಾಗ ಆಸ್ತಿಯನ್ನು ಮರು ಅಡ ಇಡಬೇಕು ಎಂದು ಬ್ಯಾಂಕ್‌ನವರು ಸೂಚಿಸುತ್ತಿರುವುದಾಗಿ ಎಂಎಸ್‌ಎಂಇಯವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರವೇ ಸಾಲಕ್ಕೆ ಭದ್ರತೆ ನೀಡಿರುವಾಗ ಬ್ಯಾಂಕ್‌ಗಳು ಹೀಗೆ ಕೇಳುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

ಸಾಲ ಮಂಜೂರಾತಿ ವಿಳಂಬವಾದರೆ ಉದ್ದಿಮೆದಾರರಿಗೆ ಅನಗತ್ಯ ಆರ್ಥಿಕ ಹೊರೆಯಾಗಲಿದೆ. ಮುಚ್ಚಳಿಕೆ ಬರೆಸಿಕೊಂಡು ಎಂಎಸ್‌ಎಂಇಗಳಿಗೆ ಸಾಲ ನೀಡುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು. ಎಂಎಸ್‌ಎಂಇ ಘಟಕಗಳ ಸಾಲದ ಮರು ಪಾವತಿಯ ಕಂತುಗಳ ವಸೂಲಾತಿಯನ್ನು ಮುಂದಿನ ವರ್ಷದ ಮಾರ್ಚ್‌ವರೆಗೆ ಮುಂದೂಡುವಂತೆ ಕೆಎಸ್‌ಎಫ್‌ಸಿಗೆ ನಿರ್ದೇಶನ ನೀಡಬೇಕುಅವರು ಅವರು ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.