ಕಲಬುರ್ಗಿ: ಈಚೆಗೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಶವ ತಾಲ್ಲೂಕಿನ ಕುರಿಕೋಟ ಸೇತುವೆ ಬಳಿಯ ಬೆಣ್ಣೆತೊರ ನದಿಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನೂ ಬಂಧಿಸಿದ್ದಾರೆ.
ಗೌಸುದ್ದೀನ್ (42) ಕೊಲೆಯಾದ ವ್ಯಕ್ತಿ. ಆರೋಪಿಗಳಾದ ಫಯಾಜ್, ನಿಜಾಮ್ ಬಾವರ್ಸಿ ಮತ್ತು ವಾಜೀದ್ ಬಂಧಿತರು.
‘ಗೌಸುದ್ದೀನ್ ಮತ್ತು ಆರೋಪಿಗಳು ಸೇರಿಕೊಂಡ ಹಳೆ ವಾಹನಗಳನ್ನು ಮಾರಾಟದ ವ್ಯವಹಾರ ಮಾಡುತ್ತಿದ್ದರು. ಫಯಾಜ್ ಹತ್ತಿರ ಗೌಸುದ್ದೀನ್ ₹ 2 ಲಕ್ಷ ಹಣ ಸಾಲ ಪಡೆದುಕೊಂಡಿದ್ದರು. ಈ ಹಣ ನೀಡುವಂತೆ ಫಯಾಜ್ ಕೇಳಿದ್ದ. ಆದರೆ, ಗೌಸುದ್ದೀನ್ ಕೊಡಲು ನಿರಾಕರಿಸಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಅ.24ರಂದು ಎಲ್ಲರೂ ಸೇರಿಕೊಂಡಿ ಒಟ್ಟಿಗೆ ಊಟ ಮಾಡುವ ನೆಪದಲ್ಲಿ ಗೌಸುದ್ದೀನ್ ಅನ್ನು ಕರೆಸಿಕೊಂಡು ಕೊಲೆ ಮಾಡಿದ್ದಾರೆ. ನಂತರ ಬೆಣ್ಣೆತೊರ ನದಿಯಲ್ಲಿ ಮೃತದೇಹವನ್ನು ಎಸದಿದ್ದಾರೆ. ಗೌಸುದ್ದೀನ್ ಕಾಣೆಯಾದ ದಿನ ಆರೋಪಿಗಳು ಜೊತೆಗಿದ್ದಕಾರಣಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಕೃತ್ಯದ ಬಗ್ಗೆಬಾಯ್ಬಿಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.