ADVERTISEMENT

ನಾರಾಯಣಸಿಂಗ್ ಬೆಂಕಿತಾತ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 5:28 IST
Last Updated 20 ಮಾರ್ಚ್ 2022, 5:28 IST
ಶಹಾಬಾದ್‌ನಲ್ಲಿ ಸದಾಶಿವ ಬೆಂಕಿ ತಾತ ಮಠದ ಪೀಠಾಧಿಪತಿ ಸದ್ಗುರು ನಾರಾಯಣಸಿಂಗ್ ಬೆಂಕಿ ತಾತನವರ 66ನೇ ಜನ್ಮದಿನೋತ್ಸವ ಪ್ರಯುಕ್ತ ತುಲಾಬಾರ ಸೇವೆ ನೆರೆವೇರಿಸಲಾಯಿತು
ಶಹಾಬಾದ್‌ನಲ್ಲಿ ಸದಾಶಿವ ಬೆಂಕಿ ತಾತ ಮಠದ ಪೀಠಾಧಿಪತಿ ಸದ್ಗುರು ನಾರಾಯಣಸಿಂಗ್ ಬೆಂಕಿ ತಾತನವರ 66ನೇ ಜನ್ಮದಿನೋತ್ಸವ ಪ್ರಯುಕ್ತ ತುಲಾಬಾರ ಸೇವೆ ನೆರೆವೇರಿಸಲಾಯಿತು   

ಶಹಾಬಾದ್: ನಗರದ ನಿಜಾಮ ಬಜಾರ ಬಡಾವಣೆಯಲ್ಲಿರುವ ವಿಭೂತಿ ಪುರುಷ ಸದ್ಗುರು ಸದಾಶಿವ ಬೆಂಕಿತಾತ ಮಠದ ಪೀಠಾಧಿಪತಿ ನಾರಾಯಣಸಿಂಗ್ ಬೆಂಕಿತಾತನವರ 66ನೇ ಜನ್ಮದಿನೋತ್ಸವವನ್ನು ಗುರುವಾರ ಆಚರಿಸಲಾಯಿತು.

ಬಳಿಕ ನಾರಾಯಣಸಿಂಗ್ ಬೆಂಕಿತಾತ ಭಕ್ತರಿಗೆ ಜೀವನ ಸಂದೇಶ ನೀಡಿದರು.

ಸಂಜೆ ಸದಾಶಿವ ಬೆಂಕಿತಾತನವರ ಕರ್ತೃ ಗದ್ದುಗೆಗೆ, ಪಾದುಕೆಗಳಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಮಹಾಪೂಜೆ ನಡೆಯಿತು. ಕಿರಿಯ ಪೂಜ್ಯರಾದ ಮಂಗಲಸಿಂಗ್ ಬೆಂಕಿತಾತ ಅವರಿಂದ ಪೂಜ್ಯರ ಪಾದಪೂಜೆ ನಡೆಯಿತು. ಸಾವಿರಾರು ಜನ ಭಕ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಲಾಯಿತು.

ADVERTISEMENT

ಮಂಜುಳಾ ಕುಲಕರ್ಣಿ ಪರಿವಾರದಿಂದ ಪೂಜ್ಯರಿಗೆ ತುಲಾಭಾರ ಸೇವೆ ಹಾಗೂ ಚನ್ನವೀರ ಬಡಿಗೇರ ರಾಜವಾಳ ಅವರು ಬೆಳ್ಳಿ ಕಿರೀಟ ತೊಡಿಸಿದರು. ಮಹಾಪ್ರಸಾದ ವಿತರಣೆ, ಅಹೋರಾತ್ರಿ ಭಜನೆ ಕಾರ್ಯಕ್ರಮ ನಡೆಯಿತು.

ವಿಜಯಾನಂದ ಮಾಣಿಕ್, ಮರಲಿಂಗ ಗಂಗಭೋ, ವೆಂಕಟೇಶ ನಾಯಕೊಡಿ, ಚಂದನ ಬುರಬುರೆ, ರಾಜೇಶ ಯನಗುಂಟಿಕರ್, ಶ್ರೀಕಾಂತ, ನಿಂಗಣ್ಣ ಕನಗನಹಳ್ಳಿ, ವಕೀಲರಾದ ಬಿ.ಬಸಣ್ಣ, ಬಿ.ಭೀಮಾಶಂಕರ, ರೇವಣಸಿದ್ದ ಮಾಣಿಕ ,ಯೂಸುಫ್ ಚೌದ್ರಿ, ಸಂತೋಷ ನಿಜಾಮ ಬಜಾರ, ಮಲ್ಲಿಕಾರ್ಜುನ ಹಾವನೂರ, ರಾಜು ಹೊಸ್ಮನಿ, ಮಲ್ಲಪ್ಪ ಕರಗಾರ, ಸಹದೇವ ಕ್ಯಾಸಪ್ಪನಳ್ಳಿ, ದೇವೆಂದ್ರ ಅಣಕಲ್, ಭೀಮು ಮದ್ರಿ, ಮಾರುತಿ ಜೋಶಿ, ಗೋಪಾಲಸಿಂಗ್ ಶಹಾಪೂರ, ಶಂಬುಲಿಂಗ ನಾಯ್ಕಲ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.