ADVERTISEMENT

ಸರ್ದಾರ್ ಪಟೇಲ್ ಜಯಂತಿ: ಕಲಬುರಗಿಯಲ್ಲಿ ಏಕತಾ ನಡಿಗೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 2:17 IST
Last Updated 31 ಅಕ್ಟೋಬರ್ 2025, 2:17 IST
<div class="paragraphs"><p>ಕಲಬುರಗಿಯಲ್ಲಿ ಏಕತಾ ಓಟ</p></div>

ಕಲಬುರಗಿಯಲ್ಲಿ ಏಕತಾ ಓಟ

   

– ಪ್ರಜಾವಾಣಿ ಚಿತ್ರ

ಕಲಬುರಗಿ: ದೇಶದ ಪ್ರಪ್ರಥಮ ಗೃಹ ಸಚಿವ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ‌ ನಗರದಲ್ಲಿ ಶುಕ್ರವಾರ 'ಏಕತಾ ನಡಿಗೆ' ಓಟ ನಡೆಯಿತು.

ADVERTISEMENT

ನಗರದ ಸೂಪರ್‌ ಮಾರ್ಕೆಟ್ ನಲ್ಲಿ ಏಕತಾ ನಡಿಗೆಗೆ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಅವರು ಪ್ರಮಾಣ ವಚನ‌ ಬೋಧಿಸಿ, ಹಸಿರು ನಿಶಾನೆ‌ ತೋರಿ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ‌ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಸಾಥ್‌ ನೀಡಿದರು.

ಬಳಿಕ ಪೊಲೀಸರು, ಎನ್.ಸಿ.ಸಿ ಕೆಡೆಟ್ ಗಳು, ಕ್ರೀಡಾ‌ವಸತಿ ಶಾಲೆಗಳ‌‌ ವಿಧ್ಯಾರ್ಥಿಗಳು, ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಏಕತಾ ನಡಿಗೆಯಲ್ಲಿ ಹೆಜ್ಜೆ ಹಾಕಿದರು.

ಸೂಪರ್ ಮಾರ್ಕೆಟ್ ನಿಂದ ಆರಂಭವಾದ ನಡಿಗೆಯು ಬ್ರಹ್ಮಪುರ ಪೊಲೀಸ್ ‌ಠಾಣೆ, ಜಗತ್ ವೃತ್ತ, ಅನ್ನಪೂರ್ಣ ಕ್ರಾಸ್, ಲಾಹೋಟಿ ಪೆಟ್ರೋಲ್ ಬಂಕ್, ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಸರ್ದಾರ್ ‌ವಲ್ಲಭಭಾಯಿ ಪಟೇಲ್ ವೃತ್ತ ತಲುಪಿ ನಡಿಗೆ ಸಂಪನ್ನಗೊಂಡಿತು.

ಡಿಸಿಪಿ ಕನಿಕಾ ಸಿಕ್ರಿವಾಲ್, ಡಿಸಿಪಿ ಪ್ರವೀಣ ನಾಯಕ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣವರ ಸೇರಿದಂತೆ ವಿವಿಧ ಠಾಣೆಗಳ ಪೊಲೀಸರು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.