
ಕಲಬುರಗಿ: ಸೇಡಂ ತಾಲ್ಲೂಕಿನಲ್ಲಿ ಹೊಸದಾಗಿ ಆದ್ಯತಾ ಪಡಿತರ ಚೀಟಿಗಳನ್ನು (ಬಿಪಿಎಲ್) ವಿತರಿಸುವ ನಿಟ್ಟಿನಲ್ಲಿ ಅನುಮೋದನೆ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಸಾರ್ವಜನಿಕರು ಅನಗತ್ಯ ಯಾವುದೇ ದಲ್ಲಾಳಿಗಳಿಗೆ ಹಣ ನೀಡಬಾರದು ಎಂದು ತಹಶೀಲ್ದಾರ್ ಶ್ರೀಯಾಂಕ ಎ.ಧನಶ್ರೀ ತಿಳಿಸಿದ್ದಾರೆ.
ಹೊಸ ಪಡಿತರ ಚೀಟಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಹ ಕುಟುಂಬಗಳಿಗೆ ಹಿರಿತನ ಆಧಾರದ ಮೇಲೆ ಅನುಮೋದನೆ ನೀಡಲಾಗುತ್ತಿದ್ದು, ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿದೆ. ಆನ್‍ಲೈನ್ ಕೆಂದ್ರದವರು ಅಥವಾ ಮಧ್ಯವರ್ತಿಗಳು ಪಡಿತರ ಚೀಟಿ ಕೊಡಿಸುವುದಾಗಿ ಹಣಕ್ಕೆ ಬೇಡಿಕೆ ಇಟ್ಟರೆ ಸಾರ್ವಜನಿಕರು ಅಂತಹವರ ಮಾತನ್ನು ನಂಬಬಾರದು. ಅರ್ಜಿದಾರರು ತಮ್ಮ ಪಡಿತರ ಚೀಟಿಯ ಅರ್ಜಿಯ ಸ್ಥಿತಿಯನ್ನು https://ahara.karnataka.gov.in/fcs_verify_kser/main.aspx ಲಿಂಕ್ ಬಳಸಿ ಪರಿಶೀಲಿಸಬಹುದು ಅಥವಾ ತಹಶೀಲ್ದಾರ್ ಕಚೇರಿಯ ಆಹಾರ ಶಾಖೆಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.