ADVERTISEMENT

ಕಲಬುರ್ಗಿ: ಪ‍್ರಜಾವಾಣಿ, ಡೆಕ್ಕನ್ ಹೆರಾಲ್ಡ್‌ನಿಂದ ಪತ್ರಿಕಾ ವಿತರಕರ ದಿನ

ಸಾಮೂಹಿಕ ವಿಮೆ, ಭವಿಷ್ಯ ನಿಧಿ, ಕನಿಷ್ಠ ವೇತನ ನಿಗದಿಗೊಳಿಸುವಿಕೆ, ಇಎಸ್‍ಐ ಸೌಲಭ್ಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 9:16 IST
Last Updated 5 ಸೆಪ್ಟೆಂಬರ್ 2020, 9:16 IST
ಪತ್ರಿಕಾ ವಿತರಕರ ದಿನಾಚರಣೆಯ ಅಂಗವಾಗಿ ಶುಕ್ರವಾರ ಬೆಳಗಿನ ಜಾವ ಕಲಬುರ್ಗಿಯ ಸೂಪರ್ ಮಾರ್ಕೆಟ್‌ನಲ್ಲಿ ವಿತರಕರು ಪ್ರಜಾವಾಣಿ ಪತ್ರಿಕೆಯನ್ನು ಪ್ರದರ್ಶಿಸಿದರು
ಪತ್ರಿಕಾ ವಿತರಕರ ದಿನಾಚರಣೆಯ ಅಂಗವಾಗಿ ಶುಕ್ರವಾರ ಬೆಳಗಿನ ಜಾವ ಕಲಬುರ್ಗಿಯ ಸೂಪರ್ ಮಾರ್ಕೆಟ್‌ನಲ್ಲಿ ವಿತರಕರು ಪ್ರಜಾವಾಣಿ ಪತ್ರಿಕೆಯನ್ನು ಪ್ರದರ್ಶಿಸಿದರು   

ಕಲಬುರ್ಗಿ: ದಿ ಪ್ರಿಂಟರ್ಸ್ ಮೈಸೂರು ಪ್ರಕಾಶನದ ನಾಡಿನ ಹೆಮ್ಮೆಯ ಪತ್ರಿಕೆಗಳಾದ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ವತಿಯಿಂದ ನಗರದಲ್ಲಿ ಪತ್ರಿಕಾ ವಿತರಕರ ದಿನವನ್ನು ಶುಕ್ರವಾರ ಆಚರಿಸಲಾಯಿತು.

ನಗರದ ಜೇವರ್ಗಿ ಕ್ರಾಸ್ ಹಾಗೂ ಸೂಪರ್ ಮಾರ್ಕೆಟ್‌ನಲ್ಲಿ ಪತ್ರಿಕಾ ವಿತರಕರನ್ನು ಭೇಟಿಯಾದ ಎರಡೂ ದಿನಪತ್ರಿಕೆಗಳ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಅಶೋಕಕುಮಾರ ಪಾಟೀಲ ಅವರು ಪತ್ರಿಕಾ ಏಜೆಂಟರು ಹಾಗೂ ವಿತರಕರನ್ನು ಭೇಟಿ ಮಾಡಿ ಶುಭಾಶಯ ಹೇಳಿದರು.

ಸೂಪರ್‌ ಮಾರ್ಕೆಟ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪತ್ರಿಕಾ ಏಜೆಂಟ್ ಹಾಗೂ ವಿತರಕರಾದ ಶ್ರೀಶೈಲ ನಂದರಗಿ, ಶಿವಾನಂದ ಗುತ್ತಾ, ಸುನೀಲ ಪೂಜಾರಿ, ಸುನೀಲ ಕಮ್ಮಾರ ಇದ್ದರು.

ADVERTISEMENT

ನ್ಯೂ ಜೇವರ್ಗಿ ಕ್ರಾಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಭಾಷ್ ಚಿಂಚೋಳಿಕರ, ವಿತರಕರಾದ ಗುರುರಾಜ ಶಾಬಾದಿ, ರಾಜು ನಿಂಗಾರೆಡ್ಡಿ, ನೀಲಕಾಂತ ನಂದರಗಿ, ಬಾಬು, ಶರಣಪ್ಪ ಪುಣ್ಯಶೆಟ್ಟಿ, ರಮೇಶ, ಮೊಹಮ್ಮದ್ ಮೋಯಿನ್, ರಾಜಶೇಖರ ಜಮಾದಾರ, ಸಚಿನ್ ಇದ್ದರು.

ಸೇವಾ ಭದ್ರತೆ ಸಿಗಲಿ: ಸರ್ವ ವಿಷಯಗಳ ಜ್ಞಾನ, ಅನುಭವದ ಅಮೃತವನ್ನು ಒಳಗೊಂಡ ಪತ್ರಿಕೆಗಳನ್ನು ಮಳೆ, ಚಳಿ, ಬಿಸಲು, ಗಾಳಿ, ಹಗಲು, ರಾತ್ರಿಯನ್ನದೇ, ಓದುಗರ ಮನೆ ಬಾಗಿಲಿಗೆ ನೇರವಾಗಿ ತಲುಪಿಸುವ ಮೂಲಕ ಪತ್ರಿಕೆ ಮತ್ತು ಓದುಗರ ನಡುವಿನ ಸಂಪರ್ಕ ಸೇತುವೆಯಾಗಿ ಪತ್ರಿಕಾ ವಿತರಕರು ಕಾರ್ಯ ಮಾಡುತ್ತಾರೆ. ಆದರೆ ಅವರ ಜೀವನ ಅಭದ್ರತೆಯಲ್ಲಿದ್ದು, ಅವರಿಗೆ ಸಾಮೂಹಿಕ ವಿಮೆ, ಭವಿಷ್ಯ ನಿಧಿ, ಕನಿಷ್ಠ ವೇತನ ನಿಗದಿಗೊಳಿಸುವಿಕೆ, ಇಎಸ್‍ಐ ಸೌಲಭ್ಯ, ಪಿಎಫ್‌ನಂತಹ ಸೇವಾ ಭದ್ರತೆ ದೊರೆಯಬೇಕೆಂದು ಪತ್ರಿಕಾ ವಿತರಕ ಗುರುರಾಜ ಗುಡ್ಡಾ ಒತ್ತಾಯಿಸಿದರು.

ನಗರದ ಕೆಎಚ್‍ಬಿ ಗ್ರೀನ್ ಪಾರ್ಕ್ ಗ್ರೀನ್ ಪಾರ್ಕ್‍ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ‘ಕೆಎಚ್‍ಬಿ ಗ್ರೀನ್ ಪಾರ್ಕ್ ಗೆಳೆಯರ ಬಳಗ’ಗಳ ಸಂಯುಕ್ತ ಆಶ್ರಯದಲ್ಲಿ ‘ಪತ್ರಿಕಾ ವಿತರಕರ ದಿನಾಚರಣೆ’ ಅಂಗವಾಗಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ವಿತರಕರಿಗೆ ಸತ್ಕಾರ ಸಮಾರಂಭದಲ್ಲಿ ಗೌರವವನ್ನು ಸ್ವೀಕರಿಸಿ ಮಾತನಾಡಿದರು.

ಜ್ಞಾನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಗಮೇಶ್ವರ ಸರಡಗಿ ಹಾಗೂ ಸುಜಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುನೀಲಕುಮಾರ ವಂಟಿ ಮಾತನಾಡಿದರು.

ಪತ್ರಿಕಾ ವಿತರಕರಾದ ಬಾಬುರಾವ ಗೌಳಿ, ಗುರುರಾಜ ಗುಡ್ಡಾ, ನಿತೀನ ಶರಸಾಗರ, ಲಕ್ಷ್ಮೀಕಾಂತ ಜಮಾದಾರ, ವಿನೋದ ಗೌಳಿ, ಶಂಕರ ಕಣ್ಣಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

ಪ್ರಮುಖರಾದ ಎಚ್.ಬಿ.ಪಾಟೀಲ, ಸಂಗಮೇಶ ಇಮ್ಡಾಪೂರ್, ನರಸಪ್ಪ ಬಿರಾದಾರ ದೇಗಾಂವ, ಸೂರ್ಯಕಾಂತ ಸಾವಳಗಿ, ವೀರೇಶ ಬೋಳಶೆಟ್ಟಿ ನರೋಣಾ, ಶಿವಕಾಂತ ಚಿಮ್ಮಾ ಮುತ್ತಂಗಿ, ಡಿ.ವಿ.ಕುಲಕರ್ಣಿ, ಶಿವಶರಣಪ್ಪ ಹಡಪದ, ಬಸವರಾಜ ಹೆಳವರ ಯಾಳಗಿ, ಶ್ರೀನಿವಾಸ ಬುಜ್ಜಿ, ಬಸವರಾಜ ರಟಕಲ್, ಓಂಕಾರ ಕಣ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.