ADVERTISEMENT

ಕಲಬುರಗಿ | ‘ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಚಿಂತನೆ ಬೆಳೆಯಲಿ’

ಆರ್.ಜೆ. ಕಾಲೇಜಿನಲ್ಲಿ ಎನ್.ಎನ್.ಎಸ್ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 5:46 IST
Last Updated 25 ಸೆಪ್ಟೆಂಬರ್ 2024, 5:46 IST
ಕಲಬುರಗಿಯ ಆರ್.ಜೆ. ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್‌ 55ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಸರ್ಕಾರಿ ಬಾಲಕಿಯರ ಪ.ಪೂ ಕಾಲೇಜಿನ ಉಪನ್ಯಾಸಕ ವಿಜಯಕುಮಾರ್ ರೋಣದ ಉದ್ಘಾಟಿಸಿದರು
ಕಲಬುರಗಿಯ ಆರ್.ಜೆ. ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್‌ 55ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಸರ್ಕಾರಿ ಬಾಲಕಿಯರ ಪ.ಪೂ ಕಾಲೇಜಿನ ಉಪನ್ಯಾಸಕ ವಿಜಯಕುಮಾರ್ ರೋಣದ ಉದ್ಘಾಟಿಸಿದರು   

ಕಲಬುರಗಿ: ‘ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಚಿಂತನೆ ಬೆಳೆಯಬೇಕೆ ಹೊರತು ವ್ಯಕ್ತಿಯ ಚಿಂತನೆ ಇರಬಾರದು’ ಎಂದು ಸರ್ಕಾರಿ ಬಾಲಕಿಯರ ಪ.ಪೂ ಕಾಲೇಜಿನ ಕನ್ನಡ ಉಪನ್ಯಾಸಕ ವಿಜಯಕುಮಾರ್ ರೋಣದ ಹೇಳಿದರು.

ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್ ಎಜುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ್ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್‌ 55ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾಭಿಮಾನ, ಸ್ವಾವಲಂಬನೆ ಬದುಕು, ಶಿಸ್ತು, ಸಮಯ ಪಾಲನೆ, ಅಧ್ಯಯನ, ಮೌಲ್ಯ ಶಿಕ್ಷಣ, ಸಾಮಾಜಿಕ ನಿಷ್ಠೆ, ಶ್ರಮ ಸಂಸ್ಕೃತಿ ವಿದ್ಯಾರ್ಥಿಗಳ ಬದುಕಿಗೆ ಪೂರಕವಾಗಿದ್ದು, ಇದನ್ನು ಅರಿಯಬೇಕು’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಭುರ್ಲಿ ಪ್ರಹ್ಲಾದ ಮಾತನಾಡಿ, ‘ಜ್ಞಾನದ ಅರಿವು, ಸಂಬಂಧಗಳ ಮಮಕಾರ ವಿದ್ಯಾರ್ಥಿಗಳಲ್ಲಿ ಇದ್ದರೆ ಬದುಕು ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ ಪ್ರಕಾಶ ಚವ್ಹಾಣ ಮಾತನಾಡಿದರು. ಸಾರಿಕಾ ಪ್ರಾರ್ಥಿಸಿದರು. ಮಳೇಂದ್ರ ಹಿರೇಮಠ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.