ADVERTISEMENT

ಆಡಳಿತದಲ್ಲಿ ‌ಯಾರ ಹಸ್ತಕ್ಷೇಪವೂ ಇಲ್ಲ: ಅಶ್ವತ್ಥ ನಾರಾಯಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 5:21 IST
Last Updated 24 ಫೆಬ್ರುವರಿ 2020, 5:21 IST
ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ
ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ   

ಕಲಬುರ್ಗಿ: ಆಡಳಿತದಲ್ಲಿ ‌ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸೇರಿದಂತೆ ‌ಯಾರ ಹಸ್ತಕ್ಷೇಪವೂ ಇಲ್ಲ. ‌ಸುಸೂತ್ರವಾಗಿ ಸರ್ಕಾರ ನಡೆಯುತ್ತಿದೆ‌ ಎಂದು ಉಪಮುಖ್ಯಮಂತ್ರಿ ‌ಡಾ.ಸಿ.ಎನ್. ಅಶ್ವತ್ಥ ‌ನಾರಾಯಣ ಸ್ಪಷ್ಟಪಡಿಸಿದರು.

ವಿವಿಧ ‌ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ‌ಭೇಟಿ ನೀಡಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಾಮಧೇಯ ಪತ್ರಕ್ಕೆ ಅಷ್ಟೊಂದು ಮಹತ್ವ ‌ನೀಡುವ ಅವಶ್ಯಕತೆ ‌ಇಲ್ಲ ಎಂದರು.

ಗುಲಬರ್ಗಾ ವಿ.ವಿ. ಕುಲಪತಿ ನೇಮಕ ‌ವಿಳಂಬ ಕುರಿತು ಮಾತನಾಡಿದ ಅವರು, ವಿ.ವಿ. ಕುಲಪತಿ ‌ಹಾಗೂ ಖಾಲಿ ಇರುವ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ರಾಜ್ಯದ ತೆರಿಗೆ ಪಾಲು ಕೇಂದ್ರದಿಂದ ಬರದೇ ಇರುವ ಕುರಿತು ಪ್ರತಿಕ್ರಿಯೆ ‌ನೀಡಿದ ಉಪಮುಖ್ಯಮಂತ್ರಿ, ಹಣಕಾಸು ಇಲಾಖೆ ಅಧಿಕಾರಿಗಳು ಈ ವಿಚಾರದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.