ADVERTISEMENT

ವಾಡಿ: ಕಾರ್ಮಿಕ ಸಂಘದ ಚುನಾವಣೆ ಮುಂದೂಡಿಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 15:34 IST
Last Updated 25 ಮಾರ್ಚ್ 2024, 15:34 IST

ವಾಡಿ: ಮಾ.26ರಂದು ನಡೆಸಲು ಉದ್ದೇಶಿಸಲಾಗಿದ್ದ ಎಸಿಸಿ ಕಾರ್ಮಿಕ ಸಂಘದ ಚುನಾವಣೆಯನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡುವಂತೆ ಚಿತ್ತಾಪುರ ಸಹಾಯಕ ಚುನಾವಣಾ ಅಧಿಕಾರಿಗಳು ಸೋಮವಾರ ಸೂಚಿಸಿದ್ದು ಕಾರ್ಮಿಕ ಸಂಘದ ಚುನಾವಣೆ ಮೇಲೆ ಕರಿಛಾಯೆ ಮೂಡಿಸಿದೆ.

ವಾಡಿ ಸಿಮೆಂಟ್ ಮಜ್ದೂರ್‌ ಯೂನಿಯನ್ ಚುನಾವಣೆ ನಿಮಿತ್ತ ಚುನಾವಣಾ ಅಧಿಕಾರಿ ಸಿದ್ಧರಾಮ ಅವರು ಪೋಲಿಸ್ ಬಂದೋಬಸ್ತ್ ನೀಡುವಂತೆ ಕೋರಿದ್ದರು. ಆದರೆ ಪೋಲಿಸ್ ಠಾಣೆಯಿಂದ ಯಾವುದೇ ಅಭಿಪ್ರಾಯ ನೀಡದ ಕಾರಣ ಅದಕ್ಕೂ ಮೇಲಾಗಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಚಾಲ್ತಿಯಲ್ಲಿರುವ ಕಾರಣ ನೀತಿ ಸಂಹಿತೆ ಮುಕ್ತಾಯವಾದ ನಂತರ ಮುಂದಿನ ಕ್ರಮ ಕೈಗೊಳ್ಳಲು ಚಿತ್ತಾಪುರ ಸಹಾಯಕ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT