ADVERTISEMENT

ಮಗುವಿನಿಂದ ದೂರವಿದ್ದು ಕೆಲಸ: ಮಹಿಬೂಬ ಖಾನ್‌

​ಪ್ರಜಾವಾಣಿ ವಾರ್ತೆ
Published 3 ಮೇ 2021, 3:57 IST
Last Updated 3 ಮೇ 2021, 3:57 IST
ಮಹಿಬೂಬ ಖಾನ್‌
ಮಹಿಬೂಬ ಖಾನ್‌   

ನಾನು ಪ್ರಸಕ್ತ ವರ್ಷ 30ಕ್ಕೂ ಹೆಚ್ಚು ಕೊರೊನಾ ಸೋಂಕಿತರ ಆರೈಕೆ ಮಾಡಿದ್ದೇನೆ. ಮೂಲತಃ ಬೀದರ್‌ ನಗರದವನಾಗಿದ್ದು, ಚಂದಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಚಿಂಚೋಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಕೆಲಸ ಸೇರಿದಾಗಿನಿಂದ ನನ್ನ ನೌಕರಿಯೇ ನನಗೆ ಜೀವನಾಧಾರ. ಅದಕ್ಕಿಂತ ಹೆಚ್ಚಾಗಿ ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡಿದರೆ ಎಂಥ ಸೋಂಕು, ರೋಗಿನ ವಿರುದ್ಧವೂ ಹೋರಾಡಿ ಗೆಲ್ಲಬಹುದು ಎಂಬುದು ನನ್ನ ಅನಿಸಿಕೆ.

ಜನರ ಜೀವ ರಕ್ಷಣೆಗಾಗಿ ನಾವು ಹಗಲಿರುಳು ಒಂದು ಮಾಡಿ ಹೋರಾಡುತ್ತಿದ್ದೇವೆ. ಜನರೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲರಂತೆ ನನಗೂ ಪತ್ನಿ, ಪುಟ್ಟ ಮಕ್ಕಳು, ಸಣ್ಣ ಸಂಸಾರವಿದೆ. ಒಂದು ವರ್ಷದ ಪುಟ್ಟ ಮಗ ಇದ್ದಾನೆ. ಅವರೆಲ್ಲರ ಚಿಂತೆಯ ಆಚೆಗೂ ನಾನು ನಿರಂತರ ಸೇವೆಯಲ್ಲಿ ತೊಡಗಿದ್ದೇನೆ. ಮನೆಗೆ ಹೋದ ತಕ್ಷಣ ಮಗು ನನ್ನತ್ತ ಧಾವಿಸುತ್ತದೆ. ಆದರೂ ಅಂತರ ಕಾಯ್ದುಕೊಳ್ಳುವ ಜವಾಬ್ದಾರಿ ನನ್ನದು. ಮಗುವನ್ನು ಮುದ್ದು ಮಾಡಲೂ ಆಗದಿದ್ದರೂ ನಾನು ನನ್ನ ಕರ್ತವ್ಯದಿಂದ ದೂರ ಸರಿದಿಲ್ಲ.

-ಮಹಿಬೂಬ ಖಾನ್‌, ಶುಶ್ರೂಷಕ ಅಧಿಕಾರಿ, ತಾಲ್ಲೂಕು ಆಸ್ಪತ್ರೆ, ಚಿಂಚೋಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.