ADVERTISEMENT

ಪಾರ್ಥೇನಿಯಂನಿಂದ ಚರ್ಮರೋಗ, ಆಸ್ತಮಾ: ಡಾ.ರಾಜು ತೆಗ್ಗೆಳ್ಳಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2018, 14:49 IST
Last Updated 7 ಸೆಪ್ಟೆಂಬರ್ 2018, 14:49 IST
ಪಾರ್ಥೇನಿಯಂ ಕಳೆ ಕಿತ್ತು ಪಾರ್ಥೇನಿಯಂ ನಿರ್ವಹಣಾ ದಿನ ಆಚರಿಸಲಾಯಿತು
ಪಾರ್ಥೇನಿಯಂ ಕಳೆ ಕಿತ್ತು ಪಾರ್ಥೇನಿಯಂ ನಿರ್ವಹಣಾ ದಿನ ಆಚರಿಸಲಾಯಿತು   

ಕಲಬುರ್ಗಿ: ಜಮೀನಿನಲ್ಲಿ ಬೆಳೆಯುವ ಪಾರ್ಥೇನಿಯಂ ಮನುಷ್ಯರು ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಚರ್ಮರೋಗ, ಆಸ್ತಮಾಕ್ಕೂ ಕಾರಣವಾಗುತ್ತಿದೆ ಎಂದು ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಜು ತೆಗ್ಗೆಳ್ಳಿ ಹೇಳಿದರು.

ಶುಕ್ರವಾರ ಪಾರ್ಥೇನಿಯಂ ನಿರ್ವಹಣಾ ದಿನಾಚರಣೆಯಲ್ಲಿ ಮಾತನಾಡಿ, ‘ಇದು 1950ರಲ್ಲಿ ನಮ್ಮ ದೇಶ ಪ್ರವೇಶಿಸಿತು. ಇಲ್ಲಿಯವರೆಗೆ ಸುಮಾರು 35 ಕೋಟಿ ಹೆಕ್ಟೇರ್‌ನಲ್ಲಿ ಹರಡಿದೆ’ ಎಂದರು.

‘ಇದು ವಾರ್ಷಿಕ ಕಳೆ ಬೆಳೆಯಾಗಿದ್ದು ಬೇಗ ಮಾಗುವಿಕೆಯ ಸಾಮರ್ಥ್ಯ ಹೊಂದಿದೆ. ಒಂದು ಸಸ್ಯವು ಅದರ ಜೀವಿತಾವಧಿಯಲ್ಲಿ 5 ಸಾವಿರದಿಂದ 25 ಸಾವಿರ ಬೀಜಗಳನ್ನು ಉತ್ಪಾದಿಸಬಲ್ಲದು. ಈ ಬೀಜಗಳು ಕಡಿಮೆ ತೂಕದ್ದಾಗಿದ್ದು, ಗಾಳಿಗೆ ದೂರದ ಸ್ಥಳಗಳಿಗೂ ಪಸರಿಸುತ್ತವೆ. ಈ ಕಳೆ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು’ ಎಂದು ಹೇಳಿದರು.

ADVERTISEMENT

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಮಂಜುನಾಥ ಪಾಟೀಲ, ಡಾ.ಜಹೀರ್‌ ಅಹಮದ್, ಡಾ. ಶಂಕ್ರಯ್ಯ ಮಠಪತಿ ಹಾಗೂ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.