ADVERTISEMENT

ಕಲಬುರ್ಗಿಯ ಸಹಾಯಕ ಪ್ರಾಧ್ಯಾಪಕಿ ಸಂಶೋಧನೆಗೆ ಪೇಟೆಂಟ್

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 3:54 IST
Last Updated 2 ಜನವರಿ 2021, 3:54 IST
ಡಾ.ಸೀಮಾ ಸಾಂಬ್ರಾಣಿ
ಡಾ.ಸೀಮಾ ಸಾಂಬ್ರಾಣಿ   

ಕಲಬುರ್ಗಿ: ಕಲಬುರ್ಗಿಯವರಾದ ಸದ್ಯ ಮುಂಬೈನ ಸೋಮಯ್ಯ ವಿದ್ಯಾವಿಹಾರ ವಿಶ್ವವಿದ್ಯಾಲಯದ ಕೆ.ಎಸ್‌. ಸೋಮಯ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸೀಮಾ ಅಜಯ್ ಸಾಂಬ್ರಾಣಿ ಅವರ ಸಂಶೋಧನೆಗೆ ಪೇಟೆಂಟ್ ದೊರಕಿದೆ.

ಕಾರ್ಬನ್ ಡಾಟ್ಸ್‌ (ಸಿ–ಡಾಟ್ಸ್)ಗಳನ್ನು ಬಳಸಿಕೊಂಡು ಡಿಎನ್‌ಎ ರೂಪಾಂತರ ಪತ್ತೆ ಮಾಡುವ ವಿಧಾನವನ್ನು ಆವಿಷ್ಕರಿಸಿರುವ ಸೀಮಾ ಅವರೊಂದಿಗೆ ವಿದ್ಯಾರ್ಥಿ ವಿಶಾಲ್ ಶೆಟ್ಟಿ ಅವರೂ ಸಂಶೋಧನೆಯಲ್ಲಿ ಕೈಜೋಡಿಸಿದ್ದಾರೆ.

ಸಾಂಪ್ರದಾಯಿಕ ಡಿಎನ್‌ಎ ರೂಪಾಂತರ ಪ್ರಕ್ರಿಯೆಯು ಹಲವು ನ್ಯೂನತೆಗಳನ್ನು ಹೊಂದಿತ್ತು ಮತ್ತು ಇನ್‌ಕ್ಯೂಬೇಷನ್ ಆಗಲು 24 ರಿಂದ 48 ಗಂಟೆ ಬೇಕಾಗುತ್ತಿತ್ತು. ಆದರೂ ಕೋಶ ಜೆನೋಮ್‌ಗಳನ್ನು ಪಡೆಯಲು ಹಲವು ಅಡೆತಡೆಗಳು ಎದುರಾಗಿದ್ದವು. ಅಲ್ಲದೇ, ನಕಾರಾತ್ಮಕ ಫಲಿತಾಂಶ ಕೊಡುವ ಸಾಧ್ಯೆತೆ ಇತ್ತು. ಸೀಮಾ ಅವರು ಸಂಶೋಧಿಸಿದ ಹೊಸ ವಿಧಾನದ ಪ್ರಕಾರ, ಇನ್‌ಕ್ಯುಬೇಷನ್‌ಗೆ ಕಡಿಮೆ ಅವಧಿ ಸಾಕಾಗುತ್ತದೆ.

ADVERTISEMENT

ಸೀಮಾ ಅವರು ನಗರದ ಅಶೋಕ–ಅರುಂಧತಿ ಬೋರಗಾಂವಕರ್ ದಂಪತಿಯ ಪುತ್ರಿ. 1ನೇ ತರಗತಿಯಿಂದ ಸ್ನಾತಕೋತ್ತರ ತರಗತಿವರೆಗೆ ಅವರು ಇಲ್ಲಿಯೇ ಶಿಕ್ಷಣ ಪೂರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.