ಕಮಲಾಪುರ: ತಾಲ್ಲೂಕಿನಲ್ಲಿ ಮತ್ತೆ 6 ಜನರಿಗೆ ಶನಿವಾರ ಕೋವಿಡ್-19 ಸೊಂಕು ದೃಢಪಟ್ಟಿದೆ.
ಪಟ್ಟಣದ 3ನೇ ವಾರ್ಡಿನ ನಿವಾಸಿ ಗರ್ಭಿಣಿಗೆ ಸೊಂಕು ತಗುಲಿದೆ. ಮಹಾರಾಷ್ಟ್ರದಿಂದ ಮರಳಿದ ಇವರು ಕಮಲಾಪುರ ಡಯಟ್‌ನಲ್ಲಿ ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ತೆರಳಿದ್ದರು.
ರಾಜನಾಳ ಗ್ರಾಮದ ಒಬ್ಬರಿಗೆ, ಕಮಲಾಪುರ ಡಯಟ್‌ನಲ್ಲಿ ಕ್ವಾರಂಟೈನ್‍ನಲ್ಲಿದ್ದ ಇತರ ಮೂವರಿಗೆ ಸೊಂಕು ತಗುಲಿದೆ. ಇವರೆಲ್ಲರನ್ನು ಜಿಮ್ಸ್‌ಗೆ ದಾಖಲಿಸಲಾಗಿದೆ.
ಸೀಲ್‌ಡೌನ್: ಈ ಹಿಂದೆ ವಿ.ಕೆ.ಸಲಗರ ಗ್ರಾಮದಲ್ಲಿ ಸೋಂಕು ತಗುಲಿದ ವ್ಯಕ್ತಿಯ ಮನೆ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.